ಕೋಟೆ ನಾಡು ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ

ಚಿತ್ರದುರ್ಗ :-  ಮಹಾಮಾರಿ ಕೊರೊನಾ ಭೀತಿಯ ನಡುವೆಯೇ ಗಣೇಶ ಹಬ್ಬ ಆಚರಣೆ ಮಹೋತ್ಸವ ನಡೆಯುತ್ತಿದೆ. ಸೋಂಕು ಹರಡುವ ಸಾಧ್ಯತೆಗಳು ದಟ್ಟವಾದ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು  ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇತ್ತ ಕೋಟೆ ನಾಡು ಚಿತ್ರದುರ್ಗದಲ್ಲಿ ಸಹ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಚಿತ್ರದುರ್ಗದ ಸ್ಟೇಡಿಯಂ ರಸ್ತೆಯ ಎಂಎಂ ಪ್ರೌಢಶಾಲೆ ಆವರಣದ ವೇದಿಕೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಕೊವಿಡ್ ಭೀತಿ ಹಿನ್ನೆಲೆ ಸರಳವಾಗಿ ಗಣೇಶೋತ್ಸವ ಆಚರಣೆಗೆ ಆಯೋಜಕರ ತಿರ್ಮಾನವಾಗಿದ್ದು ಗಣೇಶ ಮೂರ್ತಿಗೆ ಮಾದಾರ ಚೆನ್ನಯ್ಯ ಶ್ರೀಗಳು ಪೂಜೆ ಸಲ್ಲಿಸಿದರು.  ನಗರದ ಅನೇಕ ಭಕ್ತರು ಸಹ ಹಂತ ಹಂತವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 19 ದಿನಗಳ ಕಾಲ ನಡೆಯುವ ಸರಳ ಪೂಜಾ ಕಾರ್ಯಕ್ರಮ 19 ನೇ ದಿನದಂದು ಸರಳ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ ಮಾಡಲಾಗುತ್ತದೆ ಎನ್ನಲಾಗಿದೆ. ಪ್ರತಿ ವರ್ಷ ಅದ್ದೂರಿಯಾಗಿ ನಡೆಯಬೇಕಿದ್ದ ಈ ಗಣೇಶ ಮಹೋತ್ಸವ ಈ ಬಾರಿ ತೀರಾ ಸರಳವಾಗಿ ನಡೆಯುತ್ತಿದೆ.  ಬಣ್ಣ ಬಣ್ಣದ ರಂಗಿನ ಬೆಳಕಿನ ದೀಪಗಳು, ಕೆಂಪು ಬಣ್ಣದಿಂದ ಕಂಗೊಳಿಸಬೇಕಾಗಿತ್ತು. ವಿಸರ್ಜನೆಯ ಮೆರವಣಿಗೆ ದಿನದಂದು ಲಕ್ಷ ಲಕ್ಷಗಟ್ಟಲೆ ಜನಸೇರಬೇಕಿದ್ದ ಜನಸಮೂಹ ಈ ಬಾರಿ ಯುವಕರ ತಾಳ ಕುಣಿತಕ್ಕೆ ಕೊರೊನಾ ಬ್ರೇಕ್ ಹಾಕಿದ್ದು ದುರ್ಗದ ಜನತೆಗೆ ಬಾರಿ ನಿರಾಸೆ ಉಂಟುಮಾಡಿದೆ.

ಶಾಸಕಿ ಕೆ. ಪೂರ್ಣಿಮಾ ಶೀಘ್ರ ಗುಣಮುಖರಾಗಲಿ :  ಹಿರಿಯೂರಿನ ಪ್ರಸಿದ್ಧ ಶಕ್ತಿ ಗಣಪತಿಯ 49 ನೇ ವರ್ಷದ ಪೂಜಾ ಕಾರ್ಯಕ್ರಮವನ್ನು ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ನಗರದ ಸತ್ಯ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸರಳ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಇದೇ  ಸಂದರ್ಭದಲ್ಲಿ ಶಾಸಕರಾದ ಶ್ರೀಮತಿ ಕೆ. ಪೂರ್ಣಿಮಾ ಶ್ರೀನಿವಾಸ ರವರು ಕೋವಿಡ್-19 ನಿಂದ ಶೀಘ್ರ ಗುಣಮುಖರಾಗಿ ಜನ ಸೇವೆಗೆ ಮರಳಲಿ ಹಾಗೂ ತಾಲ್ಲೂಕಿನಲ್ಲಿ ಕೊರೋನ ನಿವಾರಣೆ ಆಗಲೆಂದು ಪ್ರಾರ್ಥಿಸಲಾಯಿತು.

ಉಳಿದಂತೆ ಹೊಸದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಸಹ ಸರಳವಾಗಿ ಗಣೇಶೋತ್ಸವ ಆಚರಣೆ ನಡೆಯುತ್ತಿದೆ. ಕೋವಿಡ್ -19 ಹಿನ್ನೆಲೆ ಹಳ್ಳಿಗಳಲ್ಲಿ ಸಹ ಯುವಕರು ಸರಳವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಯಾವುದೇ ಪೆಂಡಾಲ್ ಹಾಕಾದೆ , ಹೆಚ್ಚು ಅಲಂಕಾರ ಇಲ್ಲದೆ, ಧ್ವನಿ ವರ್ಧಕ ಬಳಸದೇ  ಇರುವುದರಲ್ಲೇ ಶೃಂಗಾರ ಮಾಡಿ ಪೂಜೆ  ನೆರವೆರಿಸಲಾಗುತ್ತಿದೆ. ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ರದ್ದಮಾಡಲಾಗಿದೆ. ಇನ್ನು ಕೆಲವೆಡೆ ಬೆಳಿಗ್ಗೆ ಪ್ರತಿಷ್ಠಾಪನೆ ಮಾಡಿ ಸಂಜೆ ವಿಸರ್ಜನೆ ಮಾಡಲಾಗುತ್ತದೆ.

Leave a Reply

Your email address will not be published.

Send this to a friend