ಚಿತ್ರದುರ್ಗ:: ಚಿತ್ರದುರ್ಗದಲ್ಲಿ ಮೆಡಿಕ್ ಕಾಲೇಜಿನ ಜೊತೆಗೆ ಪ್ಯಾರಾ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಹಾಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ ಸುಧಾಕರ್ ಭರವಸೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಇಂದು ನೂತನವಾಗಿ ಮೆಡಿಕಲ್ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿದ ಸಚಿವ ಡಾ.ಕೆ ಸುಧಾಕರ್, ಮೆಡಿಕಲ್ ಕಾಲೇಜಿನ ಜೊತೆಯಲ್ಲೆ ಎಲ್ಲಾ ಮಾದರಿಯ ಅರೆ ವೈದ್ಯಕೀಯ ಕೋರ್ಸ್ ಆರಂಭಕ್ಕೂ ಕ್ರಮ ಕೈಗೊಳ್ಳುತ್ತೇವೆ, ಮುಂದಿನ 30 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರದಿಂದಲೇ ಸಂಪೂರ್ಣ ಅನುಧಾನ ಮಂಜೂರಿಗೆ ಸರ್ಕಾರ ಮಾಡಲಿದ್ದು, ಕೇಂದ್ರ ಸರ್ಕಾರದಿಂದ ಯಾವುದೇ ಅನುಧಾನ ಮಂಜೂರಾಗಿಲ್ಲ ಎಂದರು.
ಚಿತ್ರದುರ್ಗದಲ್ಲಿ ನೂತನ ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ಥಾವನೆ ಬಂದಿದ್ದು, ನಿನ್ನೆಯೇ ಅನುಮೋದನೆ ದೊರೆತಿದೆ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪನವರು ಈಗಾಗಲೇ 50 ಕೋಟಿ ಅನುಧಾನ ಮಂಜೂರಿಗೆ ಸಿಎಂ ಆದೇಶ ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಹಾಗು ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಕೊರೊನಾ ಲಸಿಕೆ ಲಭ್ಯತೆಯ ಬಗ್ಗೆ ಮಾತನಾಡಿ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿ, ಕ್ಲಿನಿಕಲ್ ಟ್ರಯಲ್ ಯಶಸ್ಸಿನ ಬಗ್ಗೆ ಪ್ರತಿಷ್ಟಿತ ಸಂಸ್ಥೆಗಳು ಸ್ಪಷ್ಟನೆ ನೀಡಿವೆ, ಮಾರ್ಚ್ ಏಪ್ರಿಲ್ ಒಳಗೆ ಕೋವಿಡ್ ಲಸಿಕೆ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ತಿಪ್ಪಾರೆಡ್ಡಿ, ಪೂರ್ಣಿಮಾ, ಸಂಸದ ನಾರಾಯಣ ಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.