ಶ್ರೀರಾಮುಲು-ಸುಧಾಕರ್ ಇಬ್ಬರನ್ನಾ ಮುಖಾಮುಖಿ ಕೂರಿಸಿ ಸಿಎಂ ಸಭೆ ಯಶಸ್ವಿ..!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು ಸಚಿವ ಬಿ.ಶ್ರೀರಾಮುಲು ಹಾಗೂ ಡಾ.ಕೆ. ಸುಧಾಕರ್‌ ಅವರೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಸಚಿವದ್ವಯರನ್ನು ಕೂರಿಸಿ ಮುಖಾಮುಖಿ ಮಾತನಾಡಲು ಯಡಿಯೂರಪ್ಪ ಮುಂದಾಗಿದ್ದಾರೆ.

ನಿನ್ನೆ ಬಿಎಸ್​ವೈ, ಮೂವರು ಸಚಿವರ ಖಾತೆ ಬದಲಾವಣೆ ಮಾಡಿದ್ದರು. ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿ ಹೆಚ್ಚುವರಿಯಾಗಿದ್ದ ಸಮಾಜ ಕಲ್ಯಾಣ ಖಾತೆಯನ್ನ ಶ್ರೀರಾಮುಲು ಅವರಿಗೆ ನೀಡಿದ್ರು. ಹಾಗೇ ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಜವಾಬ್ದಾರಿಯನ್ನ ಸುಧಾಕರ್​ ಅವರಿಗೆ ವಹಿಸಿದ್ದರು. ಆರೋಗ್ಯ ಖಾತೆ ಕೈತಪ್ಪಿದ ಹಿನ್ನೆಲೆ ಶ್ರೀರಾಮುಲು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.

Leave a Reply

Your email address will not be published.

Send this to a friend