ಹೈದರಾಬಾದ್ V/S ಚೆನ್ನೈ ಮುಖಾಮುಖಿ, ಯಾರಿಗೆ ಗೆಲುವು !.

ದುಬೈ: ಶುಕ್ರವಾರ ಅಕ್ಟೋಬರ್ 2 ಇಂದು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯ 7.30 pmಗೆ ಆರಂಭವಾಗಲಿದೆ. ಸದ್ಯದ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿರುವ ಸಿಎಸ್‌ಕೆ ಗೆಲುವಿನತ್ತ ಚಿತ್ತ ಹರಿಸಿದೆ.

ಈ ಸೀಸನ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡೂ ತಂಡಗಳೂ ಎರಡು ಪಂದ್ಯಗಳನ್ನು ಸೋತು ಒಂದು ಪಂದ್ಯವನ್ನಷ್ಟೇ ಗೆದ್ದಿದೆ. ಎರಡೂ ತಂಡಗಳ ಖಾತೆಯಲ್ಲೂ ತಲಾ 2 ಅಂಕಗಳಿವೆ.

Leave a Reply

Your email address will not be published.

Send this to a friend