ಬೆಂಗಳೂರು: ಐಪಿಎಲ್ 2020 ರ ಆವೃತ್ತಿಯ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆರಂಭಗೊಳ್ಳಲಿದೆ. ವಿಶೇಷವೆಂದರೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗದು ಶ್ರೀಮಂತ ಪಂದ್ಯಾಟ ಈ ಬಾರಿ ವಿದೇಶದಲ್ಲಿ ನಡೆಯುವುದರಲ್ಲಿದೆ. ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಕೋವಿಡ್-19ನಿಂದಾಗಿ ಮುಂದೂಡಲ್ಪಟ್ಟಿತ್ತು. ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್, ನವೆಂಬರ್ 10ರಂದು ಫೈನಲ್ನೊಂದಿಗೆ ಅಂತಿಮಗೊಳ್ಳಲಿದೆ.