ಚಿತ್ರದುರ್ಗ : ಮುಂದೆ ಚಲಿಸುತ್ತಿದ್ದ ಗಾಡಿಗೆ ಲಗೇಜ್ ಗುಡ್ಸ್ ಟಾಟಾ ಏಸ್ ಡಿಕ್ಕಿಯಾದ ಪರಿಣಾಮವಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು , ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಿರಿಯೂರು ತಾಲ್ಲೂಕಿನ ಗೊರಲಡುಕು ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ತಡ ರಾತ್ರಿ ಘಟನೆ ಸಂಭವಿಸಿದೆ. ಜಗದೀಶ್ (42) ಮೃತ ಈರುಳ್ಳಿ ಮಾಲಿಕನೆಂದು ತಿಳಿದು ಬಂದಿದೆ. ಟಾಟಾ ಏಸ್ ಡ್ರೈವರ್ ಓಂಕಾರ್ (26) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದುರ್ಗ ದಿಂದ ಈರುಳ್ಳಿ ತುಂಬಿಕೊಂಡು ಬೆಂಗಳೂರು ಕಡೆ ಹೊರಟಿದ್ದ ಟಾಟಾ ಏಸ್ ( ಅಶೋಕ್ ಲೈಲಾಂಡ್) ಲಗೇಜ್ ಗುಡ್ಸ್ ವಾಹನ ಮತ್ತೊಂದು ಗಾಡಿಗೆ ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಏಸ್ ಮುಂಭಾಗದಲ್ಲಿ ನಜ್ಜುಗುಜ್ಜಾಗಿದೆ. ಲಗೇಜ್ ಗುಡ್ಸ್ ಮುಂದೆ ಯಾವ ಗಾಡಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿಲ್ಲ.
ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.