ಬೆಂಗಳೂರು : ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಲುಕ್ನಲ್ಲಿ ಮಿಂಚುತ್ತಿದ್ದಾರೆ. ಮೂರು ವರ್ಷಗಳ ಬಳಿಕ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ ಧ್ರುವ ಸರ್ಜಾ. ಹೌದು ‘ಪೊಗರು’ ಸಿನಿಮಾಗಾಗಿ ಧ್ರುವ ಸರ್ಜಾ ಉದ್ದ ಕೂದಲು ಬಿಟ್ಟಿದ್ದರು. ಸದ್ಯ ‘ಪೊಗರು’ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಕೂದಲಿಗೆ ಕತ್ತರಿ ಬಿದ್ದಿದೆ. ವಿಶೇಷ ಅಂದ್ರೆ, ಧ್ರುವ ಸುಖಾ ಸುಮ್ಮನೆ ಕೂದಲು ಕತ್ತರಿಸಿಕೊಂಡಿಲ್ಲ. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಈದೀಗ ಕೂದಲು ದಾನ ಮಾಡಿದ್ದಾರೆ.
‘ಪೊಗರು’ ಶೂಟಿಂಗ್ ಮುಗಿದ ಬಳಿಕವೇ ಕೂದಲು ಕಟ್ ಮಾಡೋಕೆ ಧ್ರುವ ಮುಂದಾಗಿದ್ದರು. ಆದ್ರೆ, ಸ್ನೇಹಿತರು ಆ ಸಂದರ್ಭದಲ್ಲಿ ಕೊಟ್ಟಂತ ಮಾಹಿತಿ, ಇಂದಿನವರೆಗೂ ಧ್ರುವ ಕೂದಲು ಇರಿಸುವಂತೆ ಮಾಡಿತ್ತು. ತಮ್ಮ ಸ್ನೇಹಿತರಿಂದ ಕ್ಯಾನ್ಸರ್ ಪೀಡಿತ ಮಕ್ಕಳ ಬಗ್ಗೆ ತಿಳಿದುಕೊಂಡ್ರು. 10 ಇಂಚು ಇರುವಂತ ಕೂದಲನ್ನ ಅನೇಕರು, ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿರೋದನ್ನ, ಧ್ರುವ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.