ಆನೇಕಲ್ : ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾಮದ ಪ್ರಗತಿಗೆ ಕ್ಷಮಿಸಬೇಕೆಂದು ಹಲವು ತಿಂಗಳಿನಿಂದ ತಯಾರಿ ನಡೆಸಿ ನಾಮಪತ್ರ ಹಾಕಿದ ಅಭ್ಯರ್ಥಿಯೊಬ್ಬರ ನಾಮಪತ್ರವನ್ನು ಅಪರಿಚಿತನೊಬ್ಬ ವಾಪಸ್ ಪಡೆದಿರುವ ಅಚ್ಚರಿ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಹೆನ್ನಾಗರ ಗ್ರಾಮ ಪಂಚಾಯಿತಿಯ ನಾಗರ ವಾರ್ಡ್ ಒಂದಕ್ಕೆ ಸಾಮಾನ್ಯ ಪುರುಷ ಸ್ಥಾನಕ್ಕೆ ಸಿದ್ದೇಶ್ ಎಂಬುವವರು ನಾಮಪತ್ರ ಸಲ್ಲಿಸಿದರು. ಇನೇನ್ನು ಸ್ಪರ್ಧೆಯಲ್ಲಿದ್ದು, ಮತದಾರರನ್ನು ಭೇಟಿ ಮಾಡಿ ಮತಕ್ಕಾಗಿ ಮನವಿ ಸಲ್ಲಿಸಲು ಅಣಿಯಾಗುತ್ತಿದ್ದಂತೆ ಸಿದ್ದೇಶ್ ಗೆ ಶಾಕ್ ಕಾದಿತ್ತು. ನಾಮಪತ್ರ ಹಿಂಪಡೆಯುವ ಕೊನೆ ದಿನವಾದ 19ರ ಸಂಜೆ ತನ್ನ ನಾಮಪತ್ರ ವಾಪಸ್ಸು ಪಡೆದುಕೊಳ್ಳಲಾಗಿದೆ ಎಂಬ ಸುದ್ದಿ ಸಿದ್ದೇಶ್ ಗೆ ತಿಳಿದಿದೆ. ಕೂಡಲೇ ಪಂಚಾಯಿತಿ ಕಚೇರಿಗೆ ಹೋಗಿದ್ದರು. ಆ ವೇಳೆಗೆ ಅಲ್ಲಿ ಚುನಾವಣಾ ಅಧಿಕಾರಿಗಳು ಯಾರು ಇರಲಿಲ್ಲ ಭಾನುವಾರ ರಜೆ ಇದ್ದಿದ್ದರಿಂದ ದೂರವಾಣಿ ಮೂಲಕ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಅಧಿಕಾರಿಗಳಿಂದ ನಿಮ್ಮ ನಾಮಪತ್ರವನ್ನು ಹಿಂಪಡೆಯಲಾಗಿದೆ ಎಂದು ಉತ್ತರ ಬಂದಿದೆ. ಈ ಘಟನೆ ಕುರಿತು ಸಿದ್ದೇಶ್ ಮಾತನಾಡಿ ನಾಮಪತ್ರ ಸಲ್ಲಿಕೆ ದಿನದಿಂದ ಹಿಂಪಡೆದುಕೊಳ್ಳಲು ಹಲವರಿಂದ ಒತ್ತಡ ಇತ್ತು ಈ ಹಿನ್ನೆಲೆಯಲ್ಲಿ ನಾನು ಯಾರಿಗೂ ಸಿಗದಂತಿದ್ದೆ ನಾಮಪತ್ರ ಹಿಂಪಡೆಯುವ ದಿನ ನಾಗೇಶ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿ ನನ್ನ ಸಹಿ ಹಾಕಿ ನನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ ನಾನು ಸ್ಪರ್ಧಿಸಿದ ವಾರ್ಡ್ನಲ್ಲಿ ಚುನಾವಣೆ ಮುಂದೂಡಬೇಕೆಂದು ನಾನು ಚುನಾವಣೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡು ಲಿಖಿತವಾಗಿ ದೂರು ನೀಡಬೇಕೆಂದಿದ್ದೇನೆ ಎಂದು ಹೆನ್ನಾಗರ ಗ್ರಾಮದ 1ನೇ ವಾರ್ಡಿನ ಅಭ್ಯರ್ಥಿಯಾದ ಸಿದ್ದೇಶ್ ತಿಳಿಸಿದರು.