ಶಿರಾ : ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಶಿರಾ ಕೃಷಿ ಮಾರುಕಟ್ಟೆ ಸಮಿತಿಯ ಕಛೇರಿಯಲ್ಲಿ ಅಧ್ಯಕ್ಷರ ಕುರ್ಚಿ ಮೇಲೆ ಕುಳಿತುಕೊಳ್ಳುವ ಮೂಲಕ ಎಪಿಎಂಸಿ ಅಧ್ಯಕ್ಷನಾದ ನನಗೆ ಮತ್ತು ತಾಲೂಕಿನ ರೈತರಿ ಅಪಮಾನ ಮಾಡಿದ್ದಾರೆ ಹಾಗಾಗಿ ಅವರು ಬೇಷರತ್ ಕ್ಷಮೆ ಕೇಳಬೇಕು ಎಂದು ಶಿರಾ ಎಪಿಎಂಸಿ ಅಧ್ಯಕ್ಷ ಜಿ ಚಂದ್ರೇಗೌಡ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದರು.
ನಿನ್ನೆ ಮಂಗಳವಾರ ಆಗಿದ್ದರಿಂದ ಶಿರಾದಲ್ಲಿ ವಾರದ ಸಂತೆ ನಡೆಯುತ್ತಿತ್ತು. ಆದ್ದರಿಂದ ಮಾಜಿ ಸಚಿವ ಜಯಚಂದ್ರ ಅವರು ಸಂತೆಗೆ ಮತ್ತು ಕೃಷಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ಹಲವಾರು ರೈತರನ್ನು ಭೇಟಿ ಮಾಡಿ ಎಪಿಎಂಸಿ ಅಧ್ಯಕ್ಷರ ಕುರ್ಚಿ ಮೇಲೆ ಕುಳಿತು ರೈತರೊಂದಿಗೆ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಇದನ್ನು ವಿರೋಧಿಸಿರುವ ಎಪಿಎಂಸಿ ಅಧ್ಯಕ್ಷ, ಜಯಚಂದ್ರ ಅವರು ಗ್ರಾಮ ಪಂಚಾಯಿತಿ ಸದಸ್ಯರು ಅಲ್ಲ, ಅವರು ಒಬ್ಬ ಮಾಜಿ ಸಚಿವರು ಅಷ್ಟೇ, ಆಗಾಗಿ ನನ್ನ ಅಧ್ಯಕ್ಷ ಕುರ್ಚಿ ಮೇಲೆ ಕುಳಿತು ಕೊಳ್ಳಲು ಯೋಗ್ಯರಿಲ್ಲ, ಅಧಿಕಾರಿಗಳ ಜೊತೆ ಸಭೆ ನಡೆಸಿ, ಸಿಸ್ಟಚಾರ ಉಲ್ಲಂಘನೆ ಮಾಡಿದ್ದಾರೆ, ಎಂದು ಜಿ. ಚಂದ್ರೇಗೌಡ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಈ ಸುದ್ದಿ ಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಜಾರಾಂ, ಸದಸ್ಯ ಎಸ್.ಆರ್. ರಾಘವೇಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.