ಬಳ್ಳಾರಿ: ಈ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ ಅಂತಾ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಾಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂನಲ್ಲಿ 66ನೇ ವನ್ಯ ಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಆನಂದ್ ಸಿಂಗ್ ಈ ಸಪ್ತಾಹದಲ್ಲಿ ಪಾಲ್ಗೊಂಡಿರುವ ಎಲ್ಲಾ ಅಧಿಕಾರಿಗಳಿಗೆ ಹಾಗೇ ಅರಣ್ಯ ರಕ್ಷಣೆ ಮಾಡುವಂತಹ ಎಲ್ಲಾ ಯುವಕರಾಗಿರಲಿ, ನಾವೆಲ್ಲರೂ ಇವತ್ತಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀವಿ.
ಇವತ್ತು ಬೆಂಗಳೂರಲ್ಲಿ ಕಾರ್ಯಕ್ರಮವಿತ್ತು. ಆದರೆ ನಾನು ಸಚಿವನಾಗಿ ಇವತ್ತು, ನನ್ನ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಅಂತಾ ಹೇಳಿ ಕೆಲವರು ಸಲಹೆ ಕೊಟ್ಟರು. ಅದು ಸಣ್ಣ ಕಾರ್ಯಕ್ರಮವಾಗಿರಲಿ, ದೊಡ್ಡ ಕಾರ್ಯಕ್ರಮವಾಗಿರಲಿ ನಮಗೆ ಸಿಕ್ಕಿರೋ ಅವಕಾಶವನ್ನ ಇಲ್ಲಿಯೇ ಮಾಡೋಣ. ಯಾಕಂದ್ರೆ ಈ ಸರ್ಕಾರಗಳು ಯಾವಾಗ ಇರುತ್ತೋ? ಯಾವಾಗ ಹೋಗುತ್ತೋ ಗೊತ್ತಿಲ್ಲ. ನನ್ನ ಹೇಳಿಕೆಯನ್ನು ಯಾರೂ ಅನ್ಯತಾ ಭಾವಿಸಬೇಡಿ. ಖಂಡಿತ ಮೂರು ವರ್ಷ ಇರುತ್ತೆ. ಇದನ್ನ ಯಾರೂ ತಪ್ಪಾಗಿ ತೆಗೆದುಕೊಳ್ಳಬಾರದು. ಮೂರು ವರ್ಷ ನಮ್ಮ ಸರ್ಕಾರ ಇರುತ್ತೆ. ಈ ಬಗ್ಗೆ ಯಾವುದೇ ಸಂಶಯ ಇಲ್ಲ ಅಂತಾ ಹೇಳಿದರು.