ಅಬುಧಾಬಿಯಲ್ಲಿ ಕರೊನಾ ಕಾಟ, ಎರಡು ಚರಣಗಳಲ್ಲಿ ಐಪಿಎಲ್?

ದುಬೈ/ನವದೆಹಲಿ:- ಅಬುಧಾಬಿಯಲ್ಲಿ ಕರೊನಾ ಪ್ರಕರಣಗಳ ಏರಿಕೆಯಿಂದ ಯುಎಇಯಲ್ಲೂ ಐಪಿಎಲ್ 13ನೇ ಆವತ್ತಿ ಆಯೋಜಿಸಲು ಸವಾಲು ಎದುರಾಗಿರುವ ನಡುವೆ, ಟೂರ್ನಿಯನ್ನು 2 ಚರಣಗಳಲ್ಲಿ ಆಯೋಜಿಸುವ ಹೊಸ ಚಿಂತನೆ ನಡೆದಿದೆ. ದುಬೈ ಮತ್ತು ಅಬುಧಾಬಿಯಲ್ಲಿ ಪ್ರತ್ಯೇಕವಾದ ಕರೊನಾ ಮಾರ್ಗಸೂಚಿಗಳಿವೆ. ಹೀಗಾಗಿ ಇವೆರಡು ನಗರಗಳ ನಡುವಿನ ಓಡಾಟವೂ ಸುಲಭವಾಗಿಲ್ಲ. ಅಬುಧಾಬಿ ನಗರ ಪ್ರವೇಶಿಸುವ ವೇಳೆ ಕರೊನಾ ಪರೀಕ್ಷೆ ಎದುರಿಸುವುದು ಕಡ್ಡಾಯವಾಗಿದೆ. ಇದು ಟೂರ್ನಿಯ ವೇಳೆ ತಂಡಗಳ ಓಡಾಟಕ್ಕೆ ಅಡಚಣೆ ಎದುರಾಗುವಂತೆ ಮಾಡಿದೆ.

Leave a Reply

Your email address will not be published. Required fields are marked *

Send this to a friend