ಬೆಳಗಾವಿ : ಕೇಂದ್ರ ಸಚಿವ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಕಾಂಗ್ರೆಸ್ ಪಕ್ಷ ಮೊದಲ ಸಭೆ ನಡೆಸಿತು. ಮಾಜಿ ಸಚಿವ ಎಂ ಬಿ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನೇಕ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗಿದೆ. ವಿಧಾನಸಭೆವಾರು ಅಭಿಪ್ರಾಯ ಸಂಗ್ರಹಿಸಿ ಇನ್ನೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಬೆಳಗಾವಿ ಲೋಕಸಭಾ ಉಪಚುನಾವಣೆ ಸ್ಪರ್ಧಿಸಲು 7-8 ಜನ ಅಭ್ಯರ್ಥಿಗಳು ಸದ್ಯ ಮುಂದೆ ಬಂದಿದ್ದಾರೆ. ಇನ್ನೂ ಅನೇಕರು ಬಿಜೆಪಿಯಿಂದ ಯಾರಿಗೆ ಟಿಕೆಟ್ ಕೊಡ್ತಾರೆ ಅನ್ನೊದರ ಮೇಲೆ ಲಾಭಿ ಮಾಡಲು ತೀರ್ಮಾನ ಮಾಡಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸಹೋದರ ಚನ್ನರಾಜ್ ಹಟ್ಟಿಹೊಳಿಗೆ ಟಿಕೆಟ್ ಕೊಡಿಸಲು ಸಾಕಷ್ಟು ಲಾಭಿ ಆರಂಭಿಸಿದ್ದಾರೆ. ಟಿಕೆಟ್ ಸಂಬಂಧ ಇನ್ನೂ ಎರಡು ಸಭೆ ನಡೆಯಲಿದ್ದು, ನಂತರ ಕೆಪಿಸಿಸಿಗೆ ಹೆಸರು ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ.