ಚಿತ್ರದುರ್ಗ : ಬೆಲಗೂರಿನ ಬಿಂದು ಮಾಧವ ಶರ್ಮಾ ಸ್ವಾಮೀಜಿ (75) ಇಹಲೋಕ ತ್ಯಜಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ
ಶ್ರೀ ಆಂಜನೇಯ ದೇಗುಲದ ಅವಧೂತ ಬಿಂದು ಮಾಧವ ಶರ್ಮಾ ಎಂದೇ ಪ್ರಸಿದ್ಧರಾಗಿದ್ದರು. ಇಂದು
ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅನೇಕ ದೇವಸ್ಥಾನಗಳನ್ನು ಕಟ್ಟುವ ಮೂಲಕ ಜನಮನ ಗಳಿಸಿದ್ದರು.
ಶ್ರೀಗಳು ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದರು. ಪ್ರತಿಯೊಬ್ಬರನ್ನು ಸಮಾನತೆಯಿಂದ ಕಾಣುತ್ತಿದ್ದರು.
ಶ್ರೀಗಳು ಸಾವು ತುಂಬಾ ನೋವು ತಂದಿದೆ. ಸನ್ಯಾಸಿ ಮುಂದೆ ಯಾರು ದೊಡ್ಡವರಲ್ಲ ಎಲ್ಲರು ಸನ್ಯಾಸಿಗಳು ಒಂದೇ, ಜಾತಿ ಹೋಗಬೇಕು, ಬ್ರಾಹ್ಮಣ ಅಂದರೆ ಅವನು ಬ್ರಹ್ಮ ಜ್ಞಾನಿ, ಎಲ್ಲರನ್ನೂ ಸಮಾನವಾಗಿ ಕಾಣಬೇಕು ಅವರು ನಿಜವಾದ ಬ್ರಾಹ್ಮಣ ಎಂದು ಹೇಳುತ್ತಿದ್ದರು.
ವರ್ಷದಲ್ಲಿ ಹತ್ತು ಬಾರಿ ಭೇಟಿ ಮಾಡುತಿದ್ದವು. ಇವರನ್ನು ಇವತ್ತು ಕಳೆದುಕೊಂಡಿರುವುದು ಅತ್ಯಂತ ಆಘಾತ ಉಂಟಾಗಿದೆ. ಸಮಾಜ ಮಾಡುವ ಕೆಲಸವನ್ನು ಈ ಸ್ವಾಮೀಜಿ ಮಾಡಿ ನಮ್ಮ ಮಠದ ಅಭಿವೃದ್ಧಿಗೆ ಸಹಕರಿಸಿದ್ದರು ಇಂತಹ ಸಂತನನ್ನು ಕಳೆದುಕೊಂಡಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಶ್ರೀಗಳು ಅಗಲಿಕೆಗೆ ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿಗಳು ದುಃಖದ ಸಂತಾಪ ಸೂಚಿಸಿದ್ದಾರೆ. ವಿವಿಧ ಮಠಾಧೀಶರು, ಹಾಗೂ ರಾಜಕೀಯ ನಾಯಕರಿಂದ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.ಶ್ರೀಗಳ
ಅಂತ್ಯಕ್ರಿಯೆ ಇಂದೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.