ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ್ದ ನಟಿ ರಾಗಿಣಿಗೆ ಕೊನೆಗೂ ಜಾಮೀನು ಮಂಜುರಾಗಿದೆ. 140ಕ್ಕೂ ಹೆಚ್ಚು ದಿನಗಳು ಜೈಲು ವಾಸ ಅನುಭವಿಸಿದ್ದ ರಾಗಿಣಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.
ಜಾಮೀನು ಸಿಕ್ಕರು ರಾಗಿಣಿಗೆ ಜೈನಿಂದ ಬಿಡುಗಡೆ ಭಾಗ್ಯಸಿಕ್ಕಿಲ್ಲ. ಜಾಮೀನು ಸಿಕ್ಕಿ ಇಂದಿಗೆ ಮೂರು ದಿನಗಳಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಹಿಡಿದು ವಕೀಲರು ದೆಹಲಿಯಿಂದ ನಿನ್ನ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು ಎನ್ ಡಿ ಪಿ ಎಸ್ ಕೋರ್ಟ್ ನಲ್ಲಿ ಹಾಜರು ಪಡಿಸಿದ್ದಾರೆ.
ಜಾಮೀನು ಮಂಜೂರು ಮಾಡಲು ಕೋರ್ಟ್ ಷರತ್ತುಗಳನ್ನು ವಿಧಿಸಿದೆ. 3 ಲಕ್ಷ ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ಹಾಗೂ 15 ದಿನಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು ಸೇರಿದಂತೆ ಅನೇಕ ಷರತ್ತು ವಿಧಿಸಿದೆ. ಷರತ್ತುಗಳನ್ನು ಪೂರೈಸಲು ಸಮಯಾವಕಾಶ ಕಡಿಮೆ ಇರುವ ಹಿನ್ನಲೆ ಇವತ್ತು ಸಹ ರಾಗಿಣಿಗೆ ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ. ನಾಳೆ ಭಾನುವಾರ ಆಗಿದ್ದರಿಂದ ಇನ್ನು ಒಂದು ಜೈಲಿನಲ್ಲೇ ಇರಬೇಕಾಗಿದೆ.
ಸೋಮವಾರ ಷರತ್ತು ಪೂರೈಸಿ ಬಿಡುಗಡೆ ಆದೇಶ ಪಡೆಯಲು ರಾಗಿಣಿ ಪರ ವಕೀಲರ ನಿರ್ಧಾರಿದ್ದಾರೆ. ಸೋಮವಾರ ರಾಗಿಣಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆ ಇದೆ.