ಬಿಹಾರ: ಮುಖ್ಯಮಂತ್ರಿ ನಿತೀಶ್ ಕುಮಾರ್ ಓರ್ವ ಭ್ರಷ್ಟ ನಾಯಕ ಎಂದು ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಗಂಭೀರ ಆರೋಪ ಮಾಡಿದ್ದಾರೆ. ‘ಸಾತ್ ನಿಶ್ಚಯ್’ ಯೋಜನೆಯಲ್ಲಿ ಅತಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಿಎಂ ನಿತೀಶ್ ಕುಮಾರ್ಗೆ ತಿಳಿದಿಲ್ಲ ಅಂದ್ರೆ ಹೇಗೆ ? ಎಂದರು. ಅವರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಅನುಮಾನ ಮೂಡ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಬಿಹಾರದ ಡುಮ್ರಾನ್ದಲ್ಲಿ ಮಾತನಾಡಿದ ಚಿರಾಗ್ ಪಾಸ್ವಾನ್, ಸಾತ್ ನಿಶ್ಚಯ್ ಯೋಜನೆಯಲ್ಲಿ ದೊಡ್ಡ ಹಗರಣ ನಡೆದಿದೆ. ಎಲ್ಜೆಪಿ ಅಧಿಕಾರಕ್ಕೆ ಬಂದರೆ, ಈ ಬಗ್ಗೆ ತನಿಖೆ ನಡೆಸಲಾಗುವುದು, ತಪ್ಪಿತಸ್ಥರೆಂದು ಸಾಬೀತಾದಲ್ಲಿ ಅವರು ಎಂಥವರೇ ಆಗಿರಲಿ ಅವರಿಗೆ ಶಿಕ್ಷೆಯಾಗುತ್ತೆ ಎಂದು ಗುಡುಗಿದ್ದಾರೆ. 2015 ರ ವಿಧಾನಸಭಾ ಚುನಾವಣೆಗೂ ಮುನ್ನ ನಿತೀಶ್ ಕುಮಾರ್, 2.7 ಲಕ್ಷ ಕೋಟಿ ರೂಪಾಯಿಯ ‘ಸಾತ್ ನಿಶ್ಚಯ್’ ಎಂಬ ಯೋಜನೆ ಘೋಷಿಸಿದ್ದರು. ಇದೀಗ 2020 ರ ಚುನಾವಣಾ ಸಮಯದಲ್ಲೂ ಸಾತ್ ನಿಶ್ಚಯ್ ಭಾಗ 2 ನ್ನು ಘೋಷಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸಿದ್ದಾರೆ ಎಂದರು.