ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸಿದಂತೆ, ಶಿರಾದಲ್ಲೂ ಕಮಲವ ಅರಳಿಸುತ್ತೇವೆ : ಬಿ.ವೈ. ವಿಜಯೇಂದ್ರ.

ಶಿರಾ : ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಉಪಚುನಾವಣೆಯಲ್ಲಿ ಕಮಲ ಅರಳಿಸಿದಂತೆ ಶಿರಾ ಉಪಚುನಾವಣೆಯಲ್ಲಿ ಸಹ ಬಿಜೆಪಿಯ ಬಾವುಟ ಹಾರಿಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ ವೈ. ವಿಜಯೇಂದ್ರ ತಿಳಿಸಿದರು ಇಂದು ಶಿರಾ ವಿಧಾನಸಭೆ ಉಪಸಮರ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು. ನಗರದ ಕೋಟೆ ಮಾರುತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಈ ವೇಳೆ ಮಾತನಾಡಿದ ವಿಜಯೇಂದ್ರ ಅವರು ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಉಪಚುನಾವಣೆಗೆ ಬಿಜೆಪಿ ಸಜ್ಜುಗೊಳ್ಳುತ್ತಿದೆ. ಶಿರಾ ಕ್ಷೇತ್ರದಲ್ಲಿ ಕೆ.ಆರ್.ಪೇಟೆ ರೀತಿಯಲ್ಲಿ ವಿಜಯ ಸಾಧಿಸಿದಂತೆ ಇಲ್ಲಿಯು ಸಹ ಗೆಲುವಿನ ಬಾವುಟ ಹಾರಿಸುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ವಿರೋಧ ಪಕ್ಷದವರು ಬೊಬ್ಬೆಹೊಡೆದಿದ್ದರು. ನಮ್ಮನ್ನ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲಾ ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ದ ಪರಿಣಾಮವಾಗಿ ಕೆ.ಆರ್. ಪೇಟೆಯಲ್ಲಿ 10 ಸಾವಿರ ಮತಗಳ ಅಂತದಿಂದ ಗೆಲುವು ಸಾಧಿಸಿದ್ದೇವು. ಅದೇ ರೀತಿ ಶಿರಾದಲ್ಲೂ ಗೆಲುವು ಸಾಧಿಸುತ್ತೇವೆ. ಬಿಜೆಪಿ ಪಕ್ಷದಲ್ಲಿ ಯಾರೇ ಅಭ್ಯರ್ಥಿ ಆದರೂ ಸರಿ ಕಣಕ್ಕಿಳಿಸಿದವರನ್ನು ಒಗ್ಗಟ್ಟಾಗಿ ಗೆಲ್ಲಿಸಿಕೊಡುತ್ತೇವೆ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಕಾಣಲು ಅವಕಾಶ ನೀಡಿಲ್ಲ, ಕೊರೋನ ಸಂಕಟ ನಡುವೆ
ರಾಜ್ಯ ಸರ್ಕಾರ ರೈತಪರ, ಉದ್ದಿಮೆ- ಸ್ನೇಹಿ ದಿಟ್ಟಹೆಜ್ಜೆ ಇರಿಸಿದೆ. ಎಷ್ಟೇ ಸಂಕಷ್ಟ ಸವಾಲುಗಳಿದ್ದರೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಸದ್ದು ಮೊಳಗಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತ ಶೈಲಿ ವಿಶ್ವಾಸ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಈ ಹಿಂದೆ ಜಾರಿಗೊಳಿಸಿದ ಅನೇಕ ಯೋಜನೆಗಳು ರೈತರಿಗೆ ಹಾಗೂ ಸಣ್ಣಪುಟ್ಟ ಉದಿಮೇದಾರರಿಗೆ ಸಹಾಯ ಮಾಡುತ್ತಾ ಹಲವಾರು ಯೋಜನೆಗಳು ಉತ್ತಮವಾಗಿವೆ.

ಈ ಬಾರಿ ಶಿರಾ ಭಾಗದ ಮತದಾರರು ಭಾಜಪವನ್ನು ಬೆಂಬಲಿಸಿದರೆ ಮುಂದಿನ ಎರಡುವರೆ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕಾರಣವಾಗುತ್ತದೆ ಹಾಗೂ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಮತ್ತಿತರ ಉತ್ತಮ ಯೋಜನೆಗಳನ್ನು ತರುತ್ತವೆ ಎಂದರು
ಇದೆ ಸಂದರ್ಭದಲ್ಲಿ ಜಿಲ್ಲಾ ಭಾಜಪ ಅದ್ಯಕ್ಷ ಸುರೇಶ್ ಗೌಡ, ಭಾರತೀಯ ಜನತಾಪಾರ್ಟಿಯ ಮುಖಂಡರಾದ ಬಿ ಕೆ. ಮಂಜುನಾಥ್, ಎಸ್.ಅರ್ ಗೌಡ, ಸೇರಿದಂತೆ ಮತ್ತಿತರರ ಕಾರ್ಯಕರ್ತರು ಹಾಜರಿದ್ದರು.

ವರದಿ ಶಿರಾ ಶ್ರೀಮಂತ್

Leave a Reply

Your email address will not be published.

Send this to a friend