ಉಪ ಚುನಾವಣೆಯಲ್ಲಿ ಜಯಚಂದ್ರಗೆ ಗೆಲುವು : ಹೊನ್ನಾದೇವಿ ದೇವಿಯ

ಶಿರಾ : ಶಿರಾ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಬಹುತೇಕ ಎಲ್ಲರಲ್ಲೂ ಇದೆ. ಆದರೆ ನಾಳೆ ಶಿರಾ ಫಲಿತಾಂಶ ಏನು ಬರಲಿದೆ ಎಂಬುದು ಇಂದೇ ಗೊತ್ತಾಗಿದೆ!

ನಾಳೆಯ ಫಲಿತಾಂಶ ಏನಾಗಲಿದೆ ಎಂಬುದು ಇಂದೇ ಗೊತ್ತಾದರೆ ಅದೊಂದು ಅಚ್ಚರಿಯೇ ಸರಿ. ಅದರಲ್ಲೂ ಅಂಥದ್ದೊಂದು ಫಲಿತಾಂಶವನ್ನು ದೇವರೇ ಹೇಳಿಬಿಟ್ಟರೆ ಅದು ಮಹಾನ್ ಅಚ್ಚರಿ. ಅಂಥ ದೊಡ್ಡ ಅಚ್ಚರಿಯ ಸಂಗತಿ ತುಮಕೂರಿನ ಹೊನ್ನಾದೇವಿ ಸನ್ನಿಧಾನದಲ್ಲಿ ಜರುಗಿದೆ.

ನಾಳೆ ಶಿರಾ‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಏನಾಗಲಿದೆ ಎಂಬ ಕುತೂಹಲದಿಂದ ತುಮಕೂರಿನ ಹೆಬ್ಬೂರು ಅತಿಥಿ ಮಠದಲ್ಲಿರುವ ಹೊನ್ನಾದೇವಿ ದೇವಸ್ಥಾನಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಹೂ ಪ್ರಸಾದ ಕೇಳಲು ಹೋಗಿದ್ದರು. ತಮ್ಮ ಪಕ್ಷದ ಟಿ.ಬಿ. ಜಯಚಂದ್ರ ಅವರು ಗೆಲ್ಲುವುದಾದರೆ ಬಲಗಡೆಯಿಂದ ಹೂ ಪ್ರಸಾದ ಕೊಡು ಎಂದು ದೇವಿಯಲ್ಲಿ ಪ್ರಾರ್ಥಿಸಿಕೊಳ್ಳಲಾಗಿತ್ತು. ಆಗ ಕೆಲವೇ ಕ್ಷಣಗಳಲ್ಲಿ ದೇವಿ ಬಲಗಡೆಯಿಂದ ಪ್ರಸಾದ ಕೊಟ್ಟಿದ್ದಾಳೆ.

ಈ ಹಿಂದೆ ಸುಮಲತಾ ಅಂಬರೀಷ್​ ವಿಷಯದಲ್ಲೂ ಹೀಗೆ ಫಲಿತಾಂಶಕ್ಕೆ ಮುನ್ನ ಇದೇ ದೇವಸ್ಥಾನಲ್ಲಿ ಹೂ ಪ್ರಸಾದ ಕೇಳಿದಾಗಲೂ ದೇವಿ ಬಲಗಡೆಯಿಂದ ಹೂ ಪ್ರಸಾದ ಕೊಟ್ಟಿದ್ದಳು. ನಂತರ ಅದರಂತೆಯೇ ಫಲಿತಾಂಶ ಬಂದಿದ್ದು, ಸುಮಲತಾ ಗೆದ್ದಿದ್ದರು. ಈಗ ಜಯಚಂದ್ರ ವಿಷಯದಲ್ಲೂ ಮತ್ತದೇ ಬಲಗಡೆ ಪ್ರಸಾದ ಸಿಕ್ಕಿದ್ದು, ದೇವಿಯ ಸೂಚನೆ ಪ್ರಕಾರ ಅವರೇ ಗೆಲ್ಲುತ್ತಾರೆ ಎಂಬ ಆತ್ಮವಿಶ್ವಾಸ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಾಗಿದೆ. ಮಾತ್ರವಲ್ಲ ದೇವಿ ಪ್ರಸಾದ ನೀಡಿದ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

Leave a Reply

Your email address will not be published.

Send this to a friend