ಕಲಬುರಗಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಹೊಡೆದ ಪರಿಣಾಮವಾಗಿ ನಾಲ್ವರು ಮಹಿಳೆಯರು ಸೇರಿ ಏಳು ಜನರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಸಾವಳಗಿ ಬಳಿ ರವಿವಾರ ಬೆಳಿಗ್ಗೆ ನಡೆದಿದೆ.
ಓರ್ವ ಗರ್ಭಿಣಿ ಸೇರಿ ನಾಲ್ವರು ಮಹಿಳೆಯರು ಹಾಗೂ ಮೂವರು ಪುರಷರು ಮೃತಪಟ್ಟಿದ್ದಾರೆ. ಇವರೆಲ್ಲರೂ ಆಳಂದ ತಾಲೂಕಿನ ನಿವಾಸಿಗಳು ಆಗಿದ್ದಾರೆ. ಗರ್ಭಿಣಿಯನ್ನು ಹೆರಿಗೆಗಾಗಿ ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗರ್ಭಿಣಿ ಇರ್ಫಾನಾ ಬೇಗಂ (25), ರುಬಿಯಾ ಬೇಗಂ (50), ಅಬೇದಾಬಿ ಬೇಗಂ (50), ಜಯಚುನಬಿ (60) ಹಾಗೂ ಮುನೀರ್ (28), ಮಹಮ್ಮದ್ ಅಲಿ (38), ಶೌಕತ್ ಅಲಿ (29) ಎಂಬುವವರೇ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಕಲಬುರಗಿ ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವರದಿ: ಪ್ರಜಾನಾಡು.ಕಾಂ.ಡೆಸ್ಕ್