ಬೆಂಗಳೂರು: ಇದೀಗ ಕರ್ನಾಟಕದಲ್ಲಿ ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿರೋ ಬೆನ್ನಲ್ಲೇ ಚಂದನವನದ ನಟಿಯಾದ ಸಂಜನಾಗೆ ಸಿಸಿಬಿ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದು ಇನ್ನು ಮಲಗಿದ್ದ ನಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ಮನೆಯನ್ನು ತಪಾಸಣೆ ಮಾಡಿದ್ದಾರೆ.
ಇನ್ನು ಡ್ರಗ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿಯನ್ನು ಕೂಡಾ ಈಗಾಗಲೇ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರೋ ಹಿನ್ನೆಲೆಯಲ್ಲಿ ಸಂಜನಾ ಹೆಸರು ಕೂಡಾ ಕೇಳಿ ಬಂದಿತ್ತು ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಶಾಕ್ ನೀಡಿ ಮನೆಯಲ್ಲಿನ 3 ಮೊಬೈಲ್,ಹಾಗೂ ಲ್ಯಾಪ್ಟಾಪ್ ವಶಪಡಿಸಿಕೊಂಡು,ತನಿಖೆಯನ್ನು ಕೈಕೊಂಡಿದ್ದಾರೆ.