ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ, ಶಾಸಕ ಬೋಪಯ್ಯ ಅವರನ್ನು ಬಂಧಿಸಿ – ಡಿಕೆಶಿ ಕಿಡಿ

ಚಿತ್ರದುರ್ಗ (ಆಗಸ್ಟ್ ೧೨) : ಮಡಿಕೇರಿಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ 26 ರಂದು ಎಸ್ಪಿ ಕಛೇರಿ ಮುತ್ತಿಗೆ ಹಾಕಲು ಸಿದ್ದರಾಮಯ್ಯ ಕರೆ ಕೊಟ್ಟ ಹಿನ್ನೆಲೆಯಲ್ಲಿ, ಕಾಂಗ್ರೆಸ್ಸಿಗರೇ ಮೊಟ್ಟೆ ಎಸೆದಿದ್ದಾರೆ ಎಂದಿರುವ ಬಿಜೆಪಿ ಶಾಸಕ ಭೋಪಯ್ಯ ವಿರುದ್ಧ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊದಲು ಆ ಬಿಜೆಪಿ ಶಾಸಕ ಭೋಪಯ್ಯನ ಬಂಧಿಸಬೇಕು ಎಂದು ಆಗ್ರಹಿಸಿದರು.

ಸುಳ್ಳಿನ ಮತ್ತೊಂದು ಹೆಸರೇ ಬಿಜೆಪಿ, ಬಿಜೆಪಿ ಶಾಸಕರು. ನಾನು ಮಾಡಿದ್ದರೆ ನಾನು ಎಂದು ಹೇಳಿಕೊಳ್ಳಬೇಕು. ನಮ್ಮ ಕಾರ್ಯಕರ್ತರು ಎಂದು ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆಂದು ಹೇಳುವುದು ಹೇಡಿತನ ಎಂದು ಬೋಪಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ವಿರೋಧವಿದ್ದ ಕಡೆ ಸಿದ್ಧರಾಮಯ್ಯ ಯಾಕೆ ಹೋಗಬೇಕು ಎಂದ ಪ್ರತಾಪ್ ಸಿಂಹ ಬಗ್ಗೆ ವ್ಯಂಗ್ಯಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಓಹೋಹೋ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಲ್ಯಾಂಡ್ ಓನರಾ ಅದೇನೋ ಮಡಿಕೇರಿ ಏನು ಅವರ ಮನೇನಾ ಅದು ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ನಿಂದ ಮಡಿಕೇರಿ ಚಲೋ ಬಗ್ಗೆ ಇನ್ನೂ ಚರ್ಚಿಸಿಲ್ಲ. ನಾನು ಬೆಂಗಳೂರು ಹೋದ ಬಳಿಕ ಚರ್ಚೆ ಮಾಡುತ್ತೇನೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಾವಾಗೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಡಿಕೆಶಿ ಇಂಧನ ಸಚಿವರಾಗಿದ್ದಾಗ ಒಳ ಒಪ್ಪಂದ, ಅಕ್ರಮ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು “ತಡ ಮಾಡದೆ ಸರ್ಕಾರ ತನಿಖೆ ಮಾಡಲಿ ಎಂದು ಡಿಕೆಶಿ ಸವಾಲು ಹಾಕಿದರು. ಕೇವಲ ಸ್ಟೇಟ್ ಮೆಂಟ್ ಮಾಡದೆ ತನಿಖೆ ಮಾಡಲಿ.
ಸಿಬಿಐ, ಇಡಿಗಾದರು ವಹಿಸಿ ತನಿಖೆ ಮಾಡಲಿ ಎಂದು ತಿಳಿಸಿದರು.

ಇನ್ನು ಡಿಕೆ ಶಿವಕುಮಾರ್ ಅವರನ್ನು ಸರ್ಕಾರ ಕಟ್ಟಿ ಹಾಕಲು ಪ್ರಯತ್ನ ವಿಚಾರಕ್ಕೆ ಮಾತನಾಡಿದ ಅವರು
ಹಗ್ಗ, ಸರಪಳಿ ಬೇಕಿದ್ದರೆ ಕಳಿಸುವೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

Leave a Reply

Your email address will not be published.

Send this to a friend