ಬೆಂಗಳೂರು : ನಟ ಚಿಕ್ಕಣ್ಣ ಸ್ಯಾಂಡಲ್ವುಡ್ನ ‘ಉಪಾಧ್ಯಕ್ಷ’ರಾಗಿ ಅಧಿಕಾರ ಅಲಂಕರಿಸಿದ್ದಾರೆ. ಹೀಗಾಂತ ನಾವು ಹೇಳ್ತಾ ಇಲ್ಲ. ಸ್ಯಾಂಡಲ್ವುಡ್ಗೆ ಸೋಲೋ ಹೀರೋ ಆಗಿ ಮಿಂಚಲಿರುವ ಚಿಕ್ಕಣ್ಣನೇ ಹೇಳ್ತಿರೋದು. ಹೌದು.. ಸೋಲೋ ಹೀರೋ ಆಗಿ ನಟ ಚಿಕ್ಕಣ್ಣ ‘ಉಪಾಧ್ಯಕ್ಷ’ ಸಿನಿಮಾದ ಮೂಲಕ ಲಾಂಚ್ ಆಗ್ತಿದ್ದಾರೆ. ಹೀಗೇ, ಪರ್ಮೆನೆಂಟ್ ‘ಉಪಾಧ್ಯಕ್ಷ’ನ ಸ್ಥಾನ ಪಡೆದುಕೊಂಡಿದ್ದಾರೆ ಚಿಕ್ಕಣ್ಣ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ‘ಉಪಾಧ್ಯಕ್ಷ’ನಿಗೆ ಬಂಡವಾಳ ಹೂಡಿದ್ದಾರೆ.
ಇಂದು ಹೆಬ್ಬಾಳದ ಅರ್ಜುನ್ ಜನ್ಯ ಸ್ಟೂಡಿಯೋದಲ್ಲಿ ರೆಕಾರ್ಡಿಂಗ್ ಸ್ಟಾರ್ಟ್ ಮಾಡೋ ಮೂಲಕ ‘ಉಪಾಧ್ಯಕ್ಷ’ ಸಿನಿಮಾದ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸಿನಿಮಾದ ಸ್ಕ್ರಿಪ್ಟ್ಗೆ ಪೂಜೆ ಮಾಡಿ ಕೆಲಸ ಶುರು ಮಾಡಿಕೊಂಡಿದ್ದಾರೆ. ಇನ್ನು, ಈ ಸಂದರ್ಭ ಚಿಕ್ಕಣ್ಣ ಹಾಗೂ ನಿರ್ದೇಶಕ ಚಂದ್ರಮೋಹನ್ ಜೊತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಮದಗಜ ನಿರ್ದೇಶಕ ಮಹೇಶ್, ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ದೇಶಕ ಎ.ಪಿ.ಅರ್ಜುನ್ ಉಪಸ್ಥಿತರಿದ್ದರು. ಇದೇ ಸಂದರ್ಭ ಉಪಾಧ್ಯಕ್ಷ ಸಿನಿಮಾದ ಟೈಟಲ್ ಪೋಸ್ಟರ್ ಲಾಂಚ್ ಮಾಡಲಾಗಿದೆ.