ಕಾಡುಪ್ರಾಣಿಗಳನ್ನು ಬೇಟೆ ಆಡಲು ಬಂದ ಖದೀಮರನ್ನೇ, ಬೇಟೆಯಾಡಿದ ಅರಣ್ಯಾಧಿಕಾರಿಗಳು.

ಚಿತ್ರದುರ್ಗ: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ 7 ಮಂದಿ ಖದೀಮರನ್ನೇ ಅರಣ್ಯಾಧಿಕಾರಿಗಳು ಬೇಟೆಯಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ 07 ಖದೀಮರನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಅವರಿಂದ ಅತ್ಯಾಧುನಿಕ ನಾಲ್ಕು ಬಂದೂಕುಗಳು, ಒಂದು ಪಿಸ್ತೂಲ್, ಬೋ ಅಂಡ್ ಆ್ಯರೋ, ಹೈ ಲೈಟ್ ಪ್ಲಾಷ್ ಹಾಗೂ ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು, ಬೇಟೆಗಾರರ ಎರಡು ಮಹಿಂದ್ರ ಜೀಪ್ ಹಾಗೂ ಮಹಿಂದ್ರ ಸ್ಕಾರ್ಪಿಯೋ ವಾಹನಗಳನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಧ ಕಡೆಗಳ ಕಾಡಿನಂಚಿನಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಯಾಡಲು ಏಳು ಮಂದಿ ಬೇಟೆಗಾರರು ಬಂದಿರುವ ಖಚಿತ ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪ್ರತಿಪಾದಕರು ಕೂಡಲೇ ಕಾರ್ಯ ಪ್ರವೃತ್ತರಾಗಿ ಇಡೀ ಅರಣ್ಯ ಪ್ರದೇಶವನ್ನು ಎರಡು ಸಲ ವೀಕ್ಷಣೆ ಮಾಡಿ ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ನಂತರ ಆರೋಪಿಗಳು ತಂದಿದ್ದ ಬಂಧಿತ 7 ಮಂದಿ ಆರೋಪಿಗಳೆಲ್ಲರು ಶಿವಮೊಗ್ಗ ಮತ್ತು ಬೆಂಗಳೂರು ಮೂಲದವರಾಗಿದ್ದಾರೆಂದು ತಿಳಿದು ಬಂದಿದೆ. ಇದರಲ್ಲಿ ಪ್ರಮುಖ ನಾಲ್ಕು ಮಂದಿ ಬೇಟೆಗಾಗರರು ಮತ್ತು ಮೂರು ಮಂದಿ ವಾಹನಗಳ ಚಾಲಕರಾಗಿದ್ದಾರೆ. ಬೇಟೆಗಾರರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಚಿತ್ರದುರ್ಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾದ ಹೆಚ್ ಜಿ. ರಘುರಾಮ್, ಹಿರಿಯೂರು ವಲಯ ಅರಣ್ಯಾಧಿಕಾರಿ ಶ್ರೀಹರ್ಷ, ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕೇಸರಿ ಮತ್ತು ಸಿಬ್ಬಂದಿ ನೇರವಾಗಿ ದಾಳಿ ನಡೆಸಿ ಬೇಟೆಗಾರರನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ CCF ಲಿಂಗರಾಜು ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದರು ಎನ್ನಲಾಗಿದೆ.

Leave a Reply

Your email address will not be published.

Send this to a friend