ಚಿತ್ರದುರ್ಗ : ಗೌರವಾನ್ವಿತ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಚಿತ್ರದುರ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಟಿ.ನಟರಾಜನ್ ವಕೀಲರ ಸಂಘಕ್ಕೆ ಭೇಟಿ ನೀಡಿ ವಕೀಲರ ಸಂಘದ ಗೌರವ ಸಮರ್ಪಣೆಯನ್ನು ಸ್ವೀಕರಿಸಿದರು ವಕೀಲರ ಸಂಘದ ಅಧ್ಯಕ್ಷರಾದ ಸಿ. ಶಿವುಯಾದವ್ ನ್ಯಾಯಮೂರ್ತಿಗಳಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಪುಷ್ಪ ಗುಚ್ಚ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿಗಳು ವಕೀಲರ ಕುಂದು ಕೊರತೆ ಗಳನ್ನು ಆಲಿಸಿದ್ದೇನೆ ಆದಷ್ಟು ಬೇಗನೇ ಸೂಕ್ತ ಸ್ಥಳ ಆಯ್ಕೆ ಮಾಡಿ ಸೂಕ್ತ ಸ್ಥಳದಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟ ನಿರ್ಮಾಣ ಮಾಡಲಾಗುವುದು ನ್ಯಾಯಾಲಯದ ಕಟ್ಟಡವನ್ನು ಶೀಘ್ರವಾಗಿ ಪ್ರಾರಂಭಿಸಿ ವಕೀಲರಿಗೆ ಸುಸಜ್ಜಿತ ಕಟ್ಟಡದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.ಜಿಲ್ಲೆಯಲ್ಲಿ ಖಾಲಿಯಿರು ನ್ಯಾಯಾಧೀಶರ ಸ್ಥಳಗಳಿಗೆ ಅತೀ ಬೇಗನೇ ನ್ಯಾಯಾಧೀಶರ ನೇಮಕ ಮಾಡಲು ಕ್ರಮವಹಿಸುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದವಕೀಲರ ಸಂಘದ ಅದ್ಯಕ್ಷರಾದ ಸಿ. ಶಿವುಯಾದವ್ ರವರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರ ಸಮಸ್ಯೆಗಳ ಬಗ್ಗೆ ಮತ್ತು ವಕೀಲರ ಕುಂದು ಕೊರತೆಗಳನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು ಜಿಲ್ಲೆಗೆ ಕೌಟುಂಬಿಕ ನ್ಯಾಯಾಲಯದ ಅವಶ್ಯಕತೆ ಬಗ್ಗೆ ಮತ್ತು ಖಾಲಿ ಇರುವ ಮೂರನೇ ಹೆಚ್ಚುವರಿ ಜೆ ಎಂ ಎಪ್ ಸಿ ಮತ್ತು ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಮನವಿ ಮಾಡಿದರು ಈಗಿರುವ ನ್ಯಾಯಾಲಯ ಬಹಳ ಚಿಕ್ಕದಾಗಿದ್ದು ವಕೀಲರ ನ್ಯಾಯಾಧೀಶರ ನ್ಯಾಯಾಲಯ ಸಿಬ್ಬಂದಿಗೆ ಹಾಗೂ ಕಕ್ಷಿಗಾರರ ವಾಹನಗಳನ್ನು ನಿಲುಗಡೆಗೆ ಸ್ಥಳಾವಕಾಶ ಸಾಕಾಗುವುದಿಲ್ಲ ಜೊತೆಗೆ ತಾಲ್ಲೂಕು ಕೇಂದ್ರಗಳಲ್ಲಿ ಉತ್ತಮವಾದ ವಿಶಾಲವಾದ ಸುಸಜ್ಜಿತ ನ್ಯಾಯಾಲಯದ ಕಟ್ಟಡಗಳು ನಿರ್ಮಾಣ ಆಗಿವೆ ಅದೇ ರೀತಿ ಜಿಲ್ಲಾ ಕೇಂದ್ರಕ್ಕೆ ಒಂದು ವಿಶಾಲವಾದ ಸುಸಜ್ಜಿತ ವಾದ ನ್ಯಾಯಾಲಯ ಕಟ್ಟಡದ ಸಮುಚ್ಚಯ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಜಿಲ್ಲಾ ನ್ಯಾಯಾಲಯ ಮತ್ತು ವಕೀಲರ ಭವನವನ್ನು ಖುದ್ದಾಗಿ ವಿಕ್ಷಣೆ ಮಾಡಿದರು ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಮನಗೂಳಿ ಪ್ರೇಮವತಿ. ಎಂ, ಜಿಲ್ಲಾ 1 ನೇ ಹೆಚ್ಚುವರಿ ನ್ಯಾಯಾಧೀಶರಾದ ಬನ್ನಿ ಕಟ್ಟೆ ಹನುಮಂತಪ್ಪ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕಲ್ಕಣಿ ಯವರು ಮತ್ತು ಕೋರ್ಟ್ ಮ್ಯಾನೇಜರ್ ದೋನಿ ಹಾಗೂ ವಕೀಲರ ಸಂಘದ ಉಪಾಧ್ಯಕ್ಷರಾದ ಜಿ.ಸಿ.ದಯಾನಂದ್,ಪ್ರಧಾನ ಕಾರ್ಯದರ್ಶಿ ಎಂ.ಮೂರ್ತಿ, ಖಜಾಂಚಿ ಅಜ್ಜಯ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು,ಹಿರಿಯ ಮತ್ತು ವಕೀಲರು ಹಾಗೂ ಮಹಿಳಾ ವಕೀಲರುಗಳು ಭಾಗವಹಿಸಿದ್ದರು.