ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಬುಕ್ಲಾರಹಳ್ಳಿ ಗೇಟ್ ಬಳಿಯ ಜಮೀನೊಂದರಲ್ಲಿ ಸುಮಾರು 36 ಲಕ್ಷ ಹಣ ಪತ್ತೆಯಾಗಿದ್ದು, ಇದು ಯಾರದ್ದು, ಯಾರಿಗೆ ಸೇರಿದ್ದು, ಯಾಕೆ ಹೀಗೆ ಬಿಸಾಡಿದ್ದಾರೆ ಘಟನೆ ನಡೆದಿದೆ. ಈ ಕುರಿತು ಚಳ್ಳಕೆರೆ ಪೋಲಿಸರು ತನಿಖೆ ಆರಂಭಿಸಿದ್ದಾರೆ. ಚಳ್ಳಕೆರೆ ತಾಲೂಕಿನ ತಳಕು ಠಾಣೆ ವ್ಯಾಪ್ತಿಯಲ್ಲಿ ಬರುವ ಬುಕ್ಲಾರಳ್ಳಿ ಗೇಟ್ ಬಳಿ “ದಿಲೀಪ್ ಬಿಲ್ಡ್ಕನ್ ” ಎಂಬ ಕಂಪನಿಯ ಹಿಂಭಾಗದ ಜಮೀನಿನಲ್ಲಿ ಇಂದು ಸುಮಾರು 36 ಲಕ್ಷ ಹಣ ಪತ್ತೆಯಾಗಿದೆ. ಆದರೆ ಈ ಹಣ ಯಾರದ್ದು ಎಂದು ಪತ್ತೆಯಾಗಿಲ್ಲ.
ವಿಷಯ ತಿಳಿದ ತಕ್ಷಣ ಪೋಲಿಸರು ಶ್ವಾನದಳ ದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕಾ ಕಳೆದ ಒಂದು ವಾರದ ಹಿಂದೆ “ದಿಲೀಪ್ ಬಿಲ್ಡ್ಕನ್” ಎಂಬ ಕಂಪನಿಯವರು ಸುಮಾರು 36 ಲಕ್ಷ ಹಣವನ್ನು ಕಂಪನಿಯ ಕೆಲಸಗಾರರಿಗೆ ವೇತನ ನೀಡಲು ತರಲಾಗಿದ್ದು ಅದು ಕಳವು ಆಗಿದೆ ಎಂದು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಹಣ ಅವರಿಗೆ ಸೇರಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಹಣ ಹೇಗೆ ಬಂತು, ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಒಂದು ವೇಳೆ ದಿಲಿಪ್ ಬಿಲ್ಡ್ ಕಾನ್ ಅವರದು ಆಗಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಲಾಗುವುದು ಎಂದರು. ಹಣ ಕಳ್ಳತನವಾಗಿದ್ದರೆ ಆರೋಪಿಗಳ ಯಾರೂ ಎಂದು ಪತ್ತೆ ಮಾಡಿ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.