ಚಿತ್ರದುರ್ಗ: ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ಇಂದಿನಿಂದ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗಿವೆ.10 ತಿಂಗಳ ಬಳಿಕ ಬ್ಯಾಗ್ ಹಿಡಿದು ಮಕ್ಕಳು ವಿದ್ಯಾದೇಗುಲದತ್ತ ಹೆಜ್ಜೆ ಹಾಕಿದ್ದಾರೆ. ಶಿಕ್ಷಣ ಇಲಾಖೆ ವಿಶೇಷ ಸಿದ್ಧತೆಯೊಂದಿಗೆ ಮಾವಿನ ಎಲೆ, ಬಾಳೆ ಕಂದು, ಬಲೂನ್, ಗ್ರೀನ್ ಕಾರ್ಪೇಟ್ ಹಾಗೂ ಬಣ್ಣಬಣ್ಣದ ತೋರಣಗಳಿಂದ ಶಾಳೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಹೊಸ ವರ್ಷದ ಮೊದಲ ದಿನ ಮಕ್ಕಳು ಸಂತಸದಿಂದ ತಮ್ಮ ತಮ್ಮ ತರಗತಿಗಳಿಗೆ ಬರುತ್ತಿದ್ದಾರೆ.
ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪೂರ್ವ ಕಾಲೇಜಿನಲ್ಲಿ ಬಲೂನ್ ಕಟ್ಟಿ ವಿದ್ಯಾರ್ಥಿಗಳನ್ನ ಸ್ವಾಗತಿಸಲಾಗಿದೆ. ಶಾಲಾ ಹಾಗೂ ಕಾಲೇಜಿನ ಪ್ರವೇಶದ್ವಾರದಲ್ಲಿ ನಿಂತು ವಿದ್ಯಾರ್ಥಿಗಳನ್ನು ಗುಲಾಬಿ ಹೂ ನೀಡುವ ಮೂಲಕ ಆತ್ಮೀಯವಾಗಿ ಶಿಕ್ಷಕರು ಬರಮಾಡಿಕೊಂಡರು. ಕೋವಿಡ್ ನಿಯಮಗಳ ಪಾಲಿಸಿಕೊಂಡು ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಟೆಸ್ಟ್ ಮಾಡಿ ಕೋರೊನಾ ಬಗ್ಗೆ ತಿಳಿ ಹೇಳುತ್ತಿದ್ದರು. ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕಿನ ಎಲ್ಲ ಕಡೆಯೂ ಕಾಲೇಜುಗಳು ಪ್ರಾರಂಭವಾಗಿದ್ದವು.