ಸಂತೋಷ್ ಆತ್ಮಹತ್ಯೆ ಪ್ರಯತ್ನ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಳಿಂದ ತನಿಖೆ ನಡೆಸಿ.

ಸಂತೋಷ್ ಆತ್ಮಹತ್ಯೆ ಪ್ರಯತ್ನ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಳಿಂದ ತನಿಖೆ ನಡೆಸಿ.

ಚಿತ್ರದುರ್ಗ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ರಾಜಕೀಯ ಕಾರ್ಯದರ್ಶಿ ಸಂತೋಷ್ ರವರ ಆತ್ಮಹತ್ಯೆ ಪ್ರಯತ್ನದ ಹಿಂದೆ ಬಹುದೊಡ್ಡ ರಾಜಕೀಯ ಒತ್ತಡ ಮತ್ತು ಬಿಜೆಪಿ ಪಕ್ಷದ ಭ್ರಷ್ಟಾಚಾರದ ವಾಸನೆ ಇರುವುದು ಸ್ಪಷ್ಟವಾಗಿದೆ ಆಗಾಗಿ ಈ ಪ್ರಕರಣವನ್ನು ಹಾಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಶಿವು ಯಾದವ್ ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಹಿಂದೆ ಇದ್ದಂತಹ ಸ್ಥಿರ ಸರ್ಕಾರವನ್ನು ಅಸ್ಥಿರ ಗೊಳಿಸಿ ಒಂದು ರಾಜ್ಯ ಸರ್ಕಾರವನ್ನು ಉರುಳಿಸಿ ರಾಜದ್ರೋಹದ ಆರೋಪಿಯಾಗಿದ್ದಾರೆ ಎಂದರು. ಇದಲ್ಲದೆ ಇವರೆ ಈ ಹಿಂದೆ ಸಚಿವ ಈಶ್ವರಪ್ಪನವರ ಕಾರ್ಯದರ್ಶಿಯ ಮೇಲೆ ಹಲ್ಲೆ ಕೂಡ ನಡೆದಿಸಿದ್ದರು ಎಂದು ತಿಳಿಸಿದ್ದಾರೆ. 17 ಜನ ಶಾಸಕರ ರಾಜೀನಾಮೆಯ ಹಿಂದೆ ಸಾವಿರಾರು ಕೋಟಿ ಕಪ್ಪು ಹಣ ವರ್ಗಾವಣೆ ಆಗಿರುವುದು ಬಹುತೇಕ ಸಂತೋಷ್ ರವರ ದಳ್ಳಾಳಿತನದಲ್ಲಿ, ಸಮ್ಮಿಶ್ರ ಸರ್ಕಾರವನ್ನು ಕಾನೂನು ಬಾಹಿರವಾಗಿ ಉರುಳಿಸಿರುವ ಬಗ್ಗೆ ಸಂಪೂರ್ಣ ಮಾಹಿತಿ ಇವರಿಗಿದೆ ಎಂದರು. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಬಂದ ನಂತರ ಅಲ್ಲಿಂದ ಇಲ್ಲಿಯವರೆಗೆ ನಡೆದ ಬಹುದೊಡ್ಡ ಭ್ರಷ್ಟಾಚಾರದ ಭಾಗವನ್ನು ಸಂಪೂರ್ಣ ವಾಗಿ ತನಿಖೆಗೆ ನಡೆಸಬೇಕು ಹಾಗೂ ಸಂತೋಷ್ ರವರ ಆತ್ಮಹತ್ಯೆ ಪ್ರಯತ್ನದ ಬಹಳಷ್ಟು ರಾಜಕೀಯ ಭ್ರಷ್ಟಾಚಾರಿಗಳ ಪಾತ್ರವಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಘೊಚರಿಸುತ್ತಿದೆ. ಈ ಘಟನೆಯನ್ನು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಮೂರ್ತಿ ಯಿಂದ ತನಿಗೆ ನಡೆಸಿದರೆ ಯಡಿಯೂರಪ್ಪ ಮತ್ತು ಅವರ ಸಚಿವಾಲಯದ ಬಹುತೇಕ ಮಂತ್ರಿಗಳು ಜೈಲು ಸೇರುವುದು ಖಚಿತ ಎಂದು ಸಿ.ಶಿವು ಯಾದವ್ ಆರೋಪಿಸಿದ್ದಾರೆ.

Leave a Reply

Your email address will not be published.

Send this to a friend