ವಿನಯ್ ಕುಲಕರ್ಣಿ ವಿಚಾರಣೆ ರಾಜಕೀಯ ಪ್ರೇರಿತ : ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

ಚಿತ್ರದುರ್ಗ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪ್ರಕರಣವನ್ನು ರೀ ಓಪನ್ ಮಾಡಿರುವುದೇ ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿನಯ್ ಕುಲಕರ್ಣಿ ಜೊತೆ ನಾನೂ ಮಾತನಾಡಿದ್ದೇನೆ, ವಿನಯ್ ಕುಲಕರ್ಣಿ ನಾನು ಏನೂ ತಪ್ಪು ಮಾಡಿಲ್ಲ ಎಂದು ನನ್ನ ಬಳಿ ಹೇಳಿದ್ದಾನೆ ಎಂದರು. ಈಗ ವಿಚಾರಣೆ ಹಂತದಲ್ಲಿರುವಾಗ ನಾನು ಏನೂ ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು. ಇನ್ನು ಕೊರೊನಾಗೆ ವ್ಯಾಕ್ಸಿನ್ ಬರುವ ತನಕ ಗ್ರಾ.ಪಂ ಚುನಾವಣೆ ಅಗತ್ಯವಿಲ್ಲ ಎಂದಿದ್ದಾರೆ. ಶಾಲೆಗಳ ಪುನರಾರಂಭ ಮಾಡವುದು ಸೂಕ್ತವಲ್ಲ, ಬದಲಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಈ ಬಾರಿ ಪಾಸ್ ಮಾಡಬೇಕು ಎಂದು ಹೇಳಿದರು. ಕೊರೊನಾ ಸಂಕಷ್ಟದ ಕಾಲದಲ್ಲಿ ವಿದ್ಯುತ್ ದರ ಏರಿಕೆ ಮಾಡಬಾರದು. ರಾಜ್ಯದಲ್ಲಿ ಇಬ್ಬರು ಸಿಎಂ ಇದ್ದಾರೆ, ಅದರಲ್ಲಿ ವಿಜಯೇಂದ್ರ ಡಿ ಫ್ಯಾಕ್ಟರ್ ಸಿಎಂ ಎಂದು ತಿಳಿಸಿದರು. ರಾಜ್ಯದ ಹಣಕಾಸು ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಅಧಿಕಾರಿಗಳಿಗೆ ಸಂಬಳ ಕೊಡಲು ಸರ್ಕಾರದಲ್ಲಿ ಹಣವಿಲ್ಲವೆಂದರು. ಇನ್ನು ಉಪಚುನಾವಣೆಯಲ್ಲಿ ಹಣ ಖರ್ಚು ಮಾಡದೆ ಗೆಲುವಿನ ಸಮೀಪ ಬಂದಿದ್ದೇವೆ ಎಂಬ ಹೆಚ್.ಡಿ.ಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಹೆಚ್.ಡಿ. ಕುಮಾರಸ್ವಾಮಿ ಅವರು ಯಾವಾಗಲೂ ಸತ್ಯಹರಿಶ್ಚಂದ್ರ, ಅವರ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Send this to a friend