ಸಚಿವ ಶ್ರೀರಾಮುಲು ಎದುರೇ ವಿಷ ಸೇವಿಸಿದ ತಿಪ್ಪೇರುದ್ರ ಸ್ವಾಮಿಜಿ.

ಚಿತ್ರದುರ್ಗ : ಕಲ್ಯಾಣ ಸಚಿವ ಶ್ರೀರಾಮುಲು ಅವರ ಎದುರೇ ಸ್ವಾಮೀಜಿಯೊಬ್ಬರು ವಿಷ ಸೇವಿಸಿರುವ ಘಟನೆ ಚಿತ್ರದುರ್ಗ ನಗರದ ಬಿಜೆಪಿ ಕಛೇರಿ ಬಳಿ ನಡೆದಿದೆ.
ಯೋಗವನ ಬೆಟ್ಟದ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ನನಗೆ ಮೋಸ ಮಾಡಿದ್ದಾರೆಂದು ಸಚಿವರಿಗೆ ಮನವಿ ಮಾಡಲು ಬಂದಾಗ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರಸ್ವಾಮಿಗಳು ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಕನಕಪುರದ ಯೋಗವನ ಬೆಟ್ಟದ ಪೀಠಾಧ್ಯಕ್ಷ ಸ್ಥಾನ ತಪ್ಪಿದ ಹಿನ್ನೆಲೆ ಹಾಗೂ ಹಣಬಲ, ಅಧಿಕಾರ ಬಲದಿಂದ ಪೀಠಾಧಿಕಾರ ತಪ್ಪಿಸಿದ ಆರೋಪವಾಗಿ ಸ್ವಾಮಿಜಿ ಸಚಿವರನ್ನು ತಡೆದು ವಿಷ ಸೇವಿಸಿದ್ದಾರೆ. ಯೋಗವನ ಬೆಟ್ಟದ ಸಿದ್ದಲಿಂಗ ಶ್ರೀಗಳ ಲಿಂಗೈಕ್ಯ ಬಳಿಕ ಬಸವ ಕುಮಾರ ಸ್ವಾಮಿಜಿ ಅಧ್ಯಕ್ಷರಾಗಿದ್ದರು. ಇದೇ ಕಾರಣಕ್ಕೆ ತಿಪ್ಪೇರುದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಚಿವ ಎದುರೇ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸ್ವಾಮಿಜಿಯನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published.

Send this to a friend