ಚಿತ್ರದುರ್ಗದಲ್ಲಿ ಕಳ್ಳರ ಕೈ ಚಳಕ 7 ಲಕ್ಷ ನಗದು ಕಳ್ಳತನ.

ಚಿತ್ರದುರ್ಗ : ದೀಪಾವಳಿ ದಿನವೇ ಚಿತ್ರದುರ್ಗದಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನವಾದ ಪ್ರಕರಣ ಬಯಲಿಗೆ ಬಂದಿದೆ. ಲಕ್ಷ್ಮಿ ಪೂಜೆಗೆಂದು ಭೀಮಸಮುದ್ರ ಅಡಿಕೆ ಮಂಡಿ ಮ್ಯಾನೇಜರ್ ಓಂಕಾರಪ್ಪ 7 ಲಕ್ಷ ನಗದು ತೆಗೆದು ಕೊಂಡು ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಎಸ್ ಬಿಐ ಬ್ಯಾಂಕಿನಲ್ಲಿ ಹೊಸ ನೋಟು ಎಕ್ಸ್ ಚೇಂಜ್ ಮಾಡಿಕೊಂಡು ಹೋಗುವುದನ್ನು ಗಮನಿಸಿದ ಕಳ್ಳರು ಕೈ ಚಳಕ ತೋರಿದ್ದಾರೆ. ಓಂಕಾರಪ್ಪ ಹಣದ ಬ್ಯಾಗ್ ಅನ್ನು ಬೈಕ್ ಹಿಂಬದಿ ಬ್ಯಾಗ್ ನಲ್ಲಿ ಇಟ್ಟು ” ಮೋರ್ ಮಾಲ್” ಬಳಿ ಬೈಕ್ ನಿಲ್ಲಿಸಿ ಕಿರಾಣಿ ಅಂಗಡಿಗೆ ಚಾಕಲೇಟ್ ತರಲು ಹೋಗಿದ್ದನು. ಇದನ್ನು ಗಮನಿಸಿದ ಕಳ್ಳರು ಹಣವಿರುವ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾರೆ. ಕಳ್ಳರು ಹಣ ದೋಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕೋಟೆ ಸಿಪಿಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ
ನಡೆಸಿದ್ದಾರೆ. ಕಳ್ಳರ ಬೆಲೆಗೆ ಪೋಲಿಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Send this to a friend