ನಾಳೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ; ರಸ್ತೆ ಮಾರ್ಗ ಸೂಚಿ ಬದಲಾವಣೆ

ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯ ಎಂಎಂ ಪ್ರೌಢಶಾಲೆ ಆವರಣದ ವೇದಿಕೆಯಲ್ಲಿ ಪ್ರತಿಷ್ಠಾಪಿಸಿರುವ ವಿಶ್ವ ಹಿಂದೂ ಪರಿಷತ್ ಮತ್ತು ಭಗರಂಗದಳದ ವತಿಯಿಂದ ಪ್ರತಿಷ್ಟಾಪಿಸಲ್ಪಟ್ಟಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯು ನಾಳೆ ವಿಸರ್ಜನೆ ಕಾರ್ಯಕ್ರಮ ನಡೆಯುವುದರಿಂದ ಸಂಚಾರದ ರಸ್ತೆ ಸಾರಿಗೆ ಮಾರ್ಗವನ್ನು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ.
ಮಹಾಗಣಪತಿ ಮೆರವಣಿಗೆ ಹಾದು ಹೋಗುವ ನಗರದ ಪ್ರಮುಖ ಬಿ.ಡಿ.ರಸ್ತೆಯ ಮೂಲಕ ಸಾಗಿ ಹೊಳಲ್ಕೆರೆ ರಸ್ತೆ ಮುಖಾಂತರ ಹೋಗಲಿದೆ.

ಗಣೇಶನ ಮೆರವಣೆಗೆಯಲ್ಲಿ ಅತಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಮೆರವಣಿಗೆ ಸಮಯದಲ್ಲಿ ನಗರದಲ್ಲಿನ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳು ನಗರದ ಮುಖ್ಯರಸ್ತೆ ಹಾಗೂ ಇತರೆ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ ನಾಳೆ ನಗರದಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕ ಸಂಚಾರ ಕ್ರಮಗೊಳಿಸುವ ದೃಷ್ಠಿಯಿಂದ ಚಿತ್ರದುರ್ಗ ನಗರದ ಮುಖ್ಯ ರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ಸಂಚರಿಸಲಿರುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶಿಸಲಾಗಿದೆ.

ಮೆರೆವಣಿಗೆಯ ಬದಲಿ ಮಾರ್ಗಗಳು: ಬೆಂಗಳೂರು ಮತ್ತು ಚಳ್ಳಕೆರೆ ಮಾರ್ಗವಾಗಿ ಬರುವ ವಾಹನಗಳು ಎನ್.ಹೆಚ್-4 ಬೈಪಾಸ್ ರಸ್ತೆ ಮುಖಾಂತರ ಬಂದು ಮೆದೆಹಳ್ಳಿ ರಸ್ತೆ ಮತ್ತು ಎಪಿಎಂಸಿ ಮಾರ್ಕೆಟ್ ಮುಖಾಂತರ ಬಸ್ ನಿಲ್ದಾಣಗಳಿಗೆ ಬಂದು ಪುನಃ ವಾಪಾಸು ಅದೇ ಮಾರ್ಗದಲ್ಲಿ ಸಂಚರಿಸುವುದು. ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಬಂದು ಪುನಃ ಅದೇ ಮಾರ್ಗದಲ್ಲಿ ಸಂಚರಿಸುವುದು. ಶಿವಮೊಗ್ಗ, ಹೊಳಲ್ಕೆರೆ, ಭೀಮಸಮುದ್ರದ ಮಾರ್ಗದಿಂದ ಬರುವ ವಾಹನಗಳು ಎನ್.ಹೆಚ್-13 ಬೈಪಾಸ್‍ನಲ್ಲಿ ಮುರುಘಾಮಠದವರೆಗೆ ಹೋಗಿ ನಂತರ ಎನ್.ಹೆಚ್-4 ಬೈಪಾಸ್ ರಸ್ತೆ ಮುಖಾಂತರ ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ನಿಲ್ದಾಣಕ್ಕೆ ಬಂದು ಪುನಃ ವಾಪಸು ಅದೇ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.

Leave a Reply

Your email address will not be published.

Send this to a friend