ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ : ಸಚಿವ ಈಶ್ವರಪ್ಪ ವ್ಯಂಗ್ಯ.

ಯೋಗೇಶ್ ಗೌಡ ಕೊಲೆ ಪ್ರಕರಣ ಸಿಬಿಐಯವರು ತನಿಖೆ ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನಿಖೆ ಸಂಬಂಧಿಸಿದಂತೆ ಸಿಬಿಐನವರು ವಿನಯ್ ಕುಲಕರ್ಣಿಯವರನ್ನು ಆರೆಸ್ಟ್ ಮಾಡಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದರು. ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಅವರ ಮೇಲೆ ಸಹ ರೈಡ್ ಗಳು ಆಗಿದ್ದವು. ಕಾಂಗ್ರೆಸ್ ಪಕ್ಷದವರು ಆಕಾಶದಿಂದ ಬಂದಿದ್ದಾರಾ ?. ಈ ರೀತಿಯ ಹೇಳಿಕೆ ನೀಡುವುದು ಕಾಂಗ್ರೇಸ್ ನವರ ಹುಟ್ಟುಗುಣ ಎಂದರು. ಸಿದ್ದರಾಮಯ್ಯ ವಿರೋಧ ಪಕ್ಷ ನಾಯಕ ಆಗಿರಲು ಯೋಗ್ಯತೆ ಇಲ್ಲ. ಅವರು ಆಯೋಗ್ಯರು ಎಂದಿದ್ದಾರೆ.
ರಾಜ್ಯದ ಜನತೆ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದ್ದರು ನೀವು ನಿಮ್ಮ ಸಣ್ಣತನ ಬಿಟ್ಟಿಲ್ಲ,
ಸಿದ್ದರಾಮಯ್ಯರವರ ಯಾವ ಹೇಳಿಕೆಗೂ ಬೆಲೆಯಿಲ್ಲ ಎಂದಿದ್ದಾರೆ.
ಇನ್ನು ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರವರು ತಿರುಕನ ಕನಸು ಕಾಣುತ್ತಿದ್ದಾರೆ.
ಹೆಣ್ಣು ಹಾಗೂ ಗೋವು ಪೂಜಿಸುವ ರಾಷ್ಟ್ರ ನಮ್ಮದು. ಅವುಗಳ ರಕ್ಷಣೆ ದೃಷ್ಠಿಯಿಂದ ಗೋವುಗಳನ್ನು ಹಾಗೂ ಮಹಿಳೆಯರಿಗೆ ರಕ್ಷಣೆ ನೀಡಬೇಕಾಗಿದೆ ಎಂದರು.ದೇಶದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಮದುವೆಯಾಗಿ ನಂತರ ಅವರನ್ನು ಬೀದಿಗೆ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆ ತರಲು ಮುಂದಾಗಿದ್ದೇವೆ ಎಂದು ಹೇಳಿದರು.

Leave a Reply

Your email address will not be published.

Send this to a friend