ಚಿತ್ರದುರ್ಗ : ರಾಜ್ಯದಲ್ಲಿ ಮೀಸಲಾತಿ ವಿಷಯ ಬಾರಿ ಸದ್ದು ಮಾಡುತ್ತಿದ್ದು ಇತ್ತ ಕೋಟೆ ನಾಡು ಚಿತ್ರದುರ್ಗದಲ್ಲಿ ಸಹ ಬುಡಕಟ್ಟು ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಇಂದು ಉರುಳುಸೇವೆ ಮೂಲಕ ಪ್ರತಿಭಟನೆ ನಡೆಸಿದರು. ಸಮಾಜದ ಮುಖಂಡರು ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಉರುಳುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕಾಡುಗೊಲ್ಲ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ. ನಮ್ಮ ಸಮಾಜವನ್ನು ಎಲ್ಲ ರಾಜಕೀಯ ಪಕ್ಷಗಳು ಕೇವಲ ಚುನಾವಣೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಪ್ರತಿಭಟನೆ ಕುರಿತು ಕರ್ನಾಟಕ ರಾಜ್ಯ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವು ಯಾದವ್ ಮಾತನಾಡಿ ನಾವು ಸರ್ಕಾರಕ್ಕೆ ಭಿಕ್ಷೆ ಕೇಳುತ್ತಿಲ್ಲ, ಸಂಮಿಧಾನ ಬದ್ದ ಹಕ್ಕನ್ನು ಕೇಳುತ್ತಿದ್ದೇವೆ,ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದ ಸಂಮಿಧಾನ ಬದ್ದ ಹಕ್ಕನ್ನು ಕರ್ನಾಟಕ ಕಾಡುಗೊಲ್ಲರು ಮೀಸಲಾತಿ ಕೇಳುತಿದ್ದೆವೇ ಎಂದರು. ಇದು ಯಾರ ಪರವೂ ಅಲ್ಲ, ವಿರೋಧದ ಹೋರಾಟವಲ್ಲ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಉಳಿವಿಗಾಗಿ, ಮುಂದಿನ ಮಕ್ಕಳ ಭವಿಷ್ಯಕ್ಕಾಗಿ, ಜನಾಂಗದ ಅಭಿವೃದ್ಧಿಗಾಗಿ ನಾವು ಹೋರಾಟ ಮಾಡುತಿದ್ದೆವೆ ಎಂದರು. ಈಗಾಗಲೇ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ರಾಜ್ಯ ಸರ್ಕಾರ ಕಡತವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಆರು ವರ್ಷ ಕಳೆದರೂ ಕೇಂದ್ರ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ವಿರುದ್ಧ ಆರೋಪಿಸಿದರು.
ದುಡ್ಡು ಇರುವವರು, ಸರ್ಕಾರ ಇರುವವರು, ಮಠ ಮಂದಿರಗಳು ಇರುವವರು ನಡೆದುಕೊಂಡು ಹೋಗ್ತಾರೆ,
ನಾವು ಹಿಂದುಳಿದ ಬುಡಕಟ್ಟು ಕಾಡುಗೊಲ್ಲ ಜನಾಂಗ ಕಾಡಿನಿಂದ ನಾಡಿಗೆ ಇವಾಗ ಬರುತಿದ್ದೆವೇ, ನಮ್ಮಲ್ಲಿ ಹಣಕಾಸಿನ ತೊಂದರೆ ಇದೆ. ಅದಕ್ಕೆ ನಾವು ಉರುಳುಸೇವೆ ಮಾಡುತ್ತಿದ್ದೇವೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಸಾಧ್ಯವಿಲ್ಲ.
ಸಮಾಜ ಮುಖಿಯಿಂದ ಕಾಡುಗೊಲ್ಲರು ದೂರ ಉಳಿದಿದ್ದು, ನಮ್ಮಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ಆಚಾರ, ವಿಚಾರ, ಉಟ್ಟು, ಮುಟ್ಟು ತುಂಬಿರುವ ಜನಾಂಗ, ಕುಲ ಶಾಸ್ತ್ರೀಯ ಅಧ್ಯಯನ ಹೇಳುತ್ತಿದೆ ಎಂದರು. ಸರ್ಕಾರ ಕೂಡಲೇ ನಮ್ಮ ಕಡೆ ಗಮನ ಹರಿಸಬೇಕು ಹಾಗೂ ಕೇಂದ್ರ ಸರ್ಕಾರ ಕಾಡುಗೊಲ್ಲರನ್ನು ಪ. ಪಂಗಡಕ್ಕೆ ಸೇರಿಸಬೇಕು ಎಂದರು. ಸರ್ಕಾರ ಒಂದು ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಕಲ್ಪಿಸಲು ಕೇಂದ್ರ ಬುಡಕಟ್ಟು ಸಚಿವ ಅರ್ಜುನ್ ಮುಂಡಾ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೋರಾಟದಲ್ಲೊಬ್ಬರು ತಿಳಿಸಿದರು. ಪ್ರತಿಭಟನೆಯಲ್ಲಿ ಅನೇಕ ಕಾಡುಗೊಲ್ಲ ಸಮಾಜದ ಮುಖಂಡರು ಭಾಗವಹಿಸಿದ್ದರು.