KSRP ಪರೀಕ್ಷೆಯಲ್ಲಿ ನಕಲಿ ಪರೀಕ್ಷಾರ್ಥಿ ಪತ್ತೆ.

ಚಿತ್ರದುರ್ಗ : ಮೀಸಲು ಕಾನ್ ಸ್ಟೇಬಲ್ ಹುದ್ದೆ ನೇಮಕಾತಿ ಪರೀಕ್ಷೆಗೆ ಮತ್ತೊಬ್ಬರ ಹೆಸರಿನಲ್ಲಿ ಹಾಜರಾಗಿ ಪರೀಕ್ಷೆ ಬರೆಯುತ್ತಿದ್ದ ನಕಲಿ ಪರೀಕ್ಷಾರ್ಥಿಯನ್ನು ಚಿತ್ರದುರ್ಗ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ
ಸಿದ್ದಾರೂಢ (26) ಸಿಕ್ಕಿ ಬಿದ್ದಿರುವ ನಕಲಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ನಿನ್ನೆ ಭಾನುವಾರ ನಗರದ 22 ಕೇಂದ್ರಗಳಲ್ಲಿ ಕೆಎಸ್ಆರ್ಪಿ ಹುದ್ದೆಗಳ ಭರ್ತಿಗೆ ಬೆಳಿಗ್ಗೆ 11 ರಿಂದ 12.30 ವರೆಗೆ ಪರೀಕ್ಷೆ ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ಕೊಠಡಿಯ ಅಧೀಕ್ಷಕರು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿದ್ದ ಅಭ್ಯರ್ಥಿಯ ದಾಖಲೆಗಳನ್ನು ಪರಿಶೀಲಿಸಿದಾಗ ಆತ ಮತ್ತೊಬ್ಬನ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಂದಿರುವುದು ತಿಳಿದು ಬಂದಿದೆ. ಸಂಶಯಗೊಂಡ ಅಧಿಕಾರಿಗಳು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿದ್ದಾರೆ. ನಕಲಿ ಪರಿಕ್ಷಾರ್ಥಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಆರೋಪಿಯು ಸ್ವಯಂ ಪ್ರೇರಿತನಾಗಿ ಸ್ನೇಹಿತನಿಗೆ ನೆರವಾಗಲು ಬಂದಿದ್ದನು ಎಂದು ತಿಳಿದು ಬಂದಿದೆ. ಈತನಿಗೆ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಪ್ರೇರೇಪಿಸುವ 1). ಭೀಮ್ ಶ್ರೀ ಹುಲ್ಲೋಳ್ 2). ಲಕ್ಷ್ಮಣ್ ತರಣ್ಣನವರ್ 3). ಸಂತೋಷ್ ಸಾಗರ್ ಇವರ ಮೇಲೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Send this to a friend