ಸಂಪುಟ ವಿಸ್ತರಣೆ, ಪುನರಚನೆ ಬಗ್ಗೆ ಸಿಎಂ ಇನ್ನೂ ನಿರ್ಧರಿಸಿಲ್ಲ : ಸಚಿವ ಶ್ರೀರಾಮುಲು

ಚಿತ್ರದುರ್ಗ : ಸಚಿವ ಸಂಪುಟ ಸಿಎಂ ವಿಸ್ತರಣೆ, ಪುನಾರಚನೆ ಬಗ್ಗೆ ಸಿಎಂ ಇನ್ನು ನಿರ್ಧಾರಿಸಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ರಾಷ್ಟ್ರೀಯ ನಾಯಕರ ಜತೆ ಚರ್ಚೆ ನಡೆದಿದೆ ಹಾಗೂ ದೆಹಲಿಗೆ ಹೋಗಿ ಸಿಎಂ ಬಿಎಸ್ವೈ ವಾಪಸ್ ಬಂದಿದ್ದಾರೆ ಎಂದರು. ಸಿಎಂ ಎಲ್ಲರನ್ನೂ ಸಮಾಧಾನ ಪಡಿಸಿಕೊಂಡು ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಬದಲಾವಣೆ ತೀರ್ಮಾನ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳಬೇಕಾಗುತ್ತದೆ.
ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಶ್ರೀರಾಮುಲು ತಿಳಿಸಿದರು.ಕೊರೊನಾ ಸಂದರ್ಭದಲ್ಲೂ ನಮ್ಮ ಸರ್ಕಾರ ಬ್ಯಾಲೆನ್ಸ್ ಮಾಡಿಕೊಂಡು ಸಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ವಿಭಜನೆ ಮಾಡಲಾಗಿದೆ.ಸಿಎಂ ಬಿಎಸ್ ವೈ ಅವರು ಸೋಮಶೇಖರ್ ಮನವೊಲಿಸಿದ್ದಾರೆ. ರಾಜಕೀಯ ದೃಷ್ಟಿಯಿಂದಲ್ಲ ಎಂದು ನಾವು ಮನವೊಲಿಸಿದ್ದೇವೆ. ಬಳ್ಳಾರಿಗೆ ಮೊಳಕಾಲ್ಮೂರು ತಾಲೂಕು ಸೇರ್ಪಡೆ ವಿಚಾರವಾಗಿ ಕುರಿತು ಮಾತನಾಡಿದ ಸಚಿವರು ಮೊಳಕಾಲ್ಮೂರು ತಾಲೂಕಿನಲ್ಲಿ ಇದರ ಬಗ್ಗೆ ಹೋರಾಟ ನಡೆದಿದೆ.
ಹಿಂದುಳಿದ ಮೊಳಕಾಲ್ಮೂರಿಗೆ 371 ಜೆ ಸೌಲಭ್ಯ ಅಗತ್ಯವಿದೆ ಬಳ್ಳಾರಿ ಸೇರ್ಪಡೆ ವಿಚಾರ ಸರ್ಕಾರ ನಿರ್ಧರಿಸಲಿದೆ ಎಂದು ಶ್ರೀರಾಮುಲು ತಿಳಿಸಿದರು.

Leave a Reply

Your email address will not be published.

Send this to a friend