ಭಾಗ್ಯಗಳ ಹೆಸರಿನಲ್ಲಿ ರಾಜ್ಯಕ್ಕೆ ದೌರ್ಭಾಗ್ಯ ತಂದಿದ್ದಾರೆ : ಸಂಸದ ಪ್ರತಾಪ್ ಸಿಂಹ

ಚಿತ್ರದುರ್ಗ : ಮಾಜಿ ಸಿಎಂ ಸಿದ್ದರಾಮಯ್ಯ ನವರು ಭಾಗ್ಯಗಳ ಹೆಸರಿನಲ್ಲಿ ರಾಜ್ಯಕ್ಕೆ ದೌರ್ಭಾಗ್ಯ ತಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರಾವಳಿಯಲ್ಲಿ ರಿಯಾಜ್ ಭಟ್ಕಳ್, ಯಾಸೀನ್ ಭಟ್ಕಳ್ ಗಳಿಂದ ದೇಶ ವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು. ಕೇರಳ ಮಾದರಿ ಕೊಲೆಗಳು ಸಹ ಮಂಗಳೂರಿನಲ್ಲೇ ಆರಂಭವಾಗಿದೆ ಎಂದರು. ಈಗ ರಾಜ್ಯದಾದ್ಯಂತ ಕೇರಳ ಮಾದರಿ ಕೊಲೆಗಳು ಹರಡಿದೆ ಗೃಹ ಸಚಿವರು, ‌ಸಿಎಂ ಈ ಬಗ್ಗೆ ಎಚ್ಚರಿಕೆವಹಿಸಿ ಮುಲೋತ್ಪಾಟಿವಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಈಗಿನ ಬಿಜೆಪಿ ಸರ್ಕಾರ ದಿವಾಳಿಯಾಗಿದೆ ಎಂದಿದ್ದ ಸಿದ್ದರಾಮಯ್ಯಗೆ ಹೇಳಿಕೆಗೆ ಬಿಜೆಪಿ ಸರ್ಕಾರ ದಿವಾಳಿ ಆಗಿದೆ ಎಂದ ಸಿದ್ಧರಾಮಯ್ಯಗೆ ನೈತಿಕತೆ ಇಲ್ಲ ಎಂದು ಟಾಂಗ್ ನೀಡಿದರು.
ಭಾಗ್ಯಗಳ ಹೆಸರಿನಲ್ಲಿ ರಾಜ್ಯಕ್ಕೆ ದೌರ್ಭಾಗ್ಯ ತಂದಿದ್ದಾರೆ.ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡೋ ಅರ್ಹತೆ ಯಾವುದು ಇಲ್ಲ ಎಂದಿದ್ದಾರೆ. ಅವರು ಅವಧಿಯಲ್ಲಿ ರಾಜ್ಯದ ಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Leave a Reply

Your email address will not be published.

Send this to a friend