ಚಿತ್ರದುರ್ಗ: ಶಾಸಕರ ಬಳಿ ಯಾವ ಸಿಡಿ ಇದೆಯೋ ಇಲ್ಲ ಗೊತ್ತಿಲ್ಲ, ಅಂತೆ ಕಂತೆಗಳನ್ನೇ ಮಿಡಿಯಾಗಳ ಮುಂದೆ ಹೇಳಿದ್ದಾರೆಂದು ಎಂದು ಚಿತ್ರದುರ್ಗದಲ್ಲಿ ನೂತನ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಸಚಿವರಾದ ಮೇಲೆ ಮೊದಲ ಬಾರಿಗೆ ಕೋಟೆ ನಾಡು ಚಿತ್ರದುರ್ಗಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂಟಿಬಿ, ಸಿಡಿ ಇದೇ ಎಂದು ಬಿಜೆಪಿ ನಾಯಕರೋ ಅಥವಾ ಬೇರೆ ಪಕ್ಷದ ನಾಯಕರು ಹೇಳುತ್ತಾರೋ ಗೊತ್ತಿಲ್ಲ. ಸಿಡಿ ಇದ್ರೆ ಬಿಡುಗಡೆ ಮಾಡಲಿ ಸಿಡಿ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಪ್ರಯೋಜನವಿಲ್ಲ. ಸಿಡಿ ಇದ್ರೆ ಬಿಡುಗೆ ಮಾಡಲಿ ರಾಜ್ಯ ಜನತೆಗೆ ಗೊತ್ತಾಗಲಿ ಎಂದರು.
ಸಿಡಿ ಹೆಸರು ಹೇಳಿಕೊಂಡು ಮಂತ್ರಿಯಾದವರು, ಸಿಡಿ ಇಟ್ಕೊಂಡು ಹೆದರಿಕೆ ಬೆದರಿಕೆ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಇನ್ನು ಸಚಿವ ಯೋಗೇಶ್ವರ ನನ್ನ ಬಳಿ ಆಸ್ತಿ ಅಡವಿಟ್ಟು ಸಾಲ ಪಡೆದುಕೊಂಡಿಲ್ಲ. ಮನೆನೂ ಅಡವಿಟ್ಟಿಲ್ಲ, ಮಠನೂ ಅಡವಿಟ್ಟಿಲ್ಲ. ಜಾರಕಿಹೂಳಿ ಯಾವ ಕಾರಣಕ್ಕೆ ಹೀಗೆ ಹೇಳುತ್ತಿರಿ ಎಂದು ಕೇಳಿದ್ದೇನೆ, ಸತ್ಯಾಸತ್ಯತೆ ಇದ್ದರೆ ಮಾತಾಡಿ ಎಂದು ಹೇಳಿರುವೆ ಎಂದರು. ಮೂರು ದಿನಗಳಲ್ಲಿ ಖಾತೆ ಹಂಚಿಕೆ ನಡೆಯಲಿದೆ. ಯಾವ ಖಾತೆ ಕೊಟ್ಟರು ನಾನು ನಿಭಾಯಿಸುವೆ. ಯಾರಿಗೆ ಯಾವ ಖಾತೆ ನೀಡುತ್ತಾರೋ ಗೊತ್ತಿಲ್ಲ. 17 ಶಾಸಕರು ಒಟ್ಟಾಗಿದ್ದೇವೆ. ಮುಂದಿನ ದಿನಗಳಲ್ಲಿ ಮುನಿರತ್ನ, ವಿಶ್ವನಾಥ ಸೇರಿ ಉಳಿದವರಿಗೂ ಸಚಿವ ಸ್ಥಾನ ಕೊಡ್ತಾರೆ ಎಂದರು.
ವಿರೋಧ ಪಕ್ಷದವವರ ಮಾತಾಡುತ್ತಾರೆ. ಸಚಿವ ಸ್ಥಾನ ಹಂಚಿಕೆ ಬಳಿಕ ಅಸಮಾಧಾನ ಆಗುವುದು ಸಹಜ ಶಾಸಕ ಯತ್ನಾಳ ಬಳಿ ಸಿಡಿ ಇದ್ರೆ ಬಿಡುಗಡೆ ಮಾಡಲಿ ಎಂದು ಸಚಿವ ಎಂಟಿಬಿ ನಾಗರಾಜ್ ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಹೇಳಿದರು.