ನಾಯಕನಹಟ್ಟಿ ತ್ರಿವಳಿ ಕೊಲೆ ಪ್ರಕರಣ, 06 ಜನ ಆರೋಪಿಗಳ ಬಂಧನ.

ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗದ ನಾಯಕನಹಟ್ಟಿ ಗ್ರಾಮದಲ್ಲಿ ನಡೆದ ಮೂವರ ತ್ರಿವಳಿ ಕೊಲೆ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಇದೀಗ ಚಿತ್ರದುರ್ಗ ಪೋಲಿಸರ ಕಾರ್ಯಾಚರಣೆಯಿಂದ ಆರು ಜನ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಪೋಲಿಸರು ಯಶಸ್ವಿಯಾಗಿದ್ದಾರೆ. 2020ರ ಆಗಸ್ಟ್ 17ರಂದು ತಡರಾತ್ರಿ ಒಂದೇ ಕುಟುಂಬದ ಮೂವರು ಹಂದಿ ಸಾಕುವವರನ್ನ ಕೊಲೆ ಮಾಡಲಾಗಿತ್ತು. ತಂದೆ ಸೀನಪ್ಪ(53) ಮಗ ಯಲ್ಲೇಶ್(22) ಸೀನಪ್ಪನ ತಮ್ಮನ ಮಗ ಮಾರೇಶ್(23) ಇವರ ಬರ್ಬರ ಹತ್ಯೆಯಾಗಿತ್ತು. ಒಬ್ಬರ ರುಂಡವನ್ನು ಆರೋಪಿಗಳು ಹೊತ್ತೊಯ್ಯಿದಿದ್ದರು. ಹಂದಿ ಸಾಕಣೆ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿತ್ತು. ರಾಣೆಬೆನ್ನೂರು ಮೂಲದ 06ಮಂದಿ ಆರೋಪಿಗಳ ಬಂಧನವಾಗಿದೆ. ಆರೋಪಿಗಳಾದ ಸಿದ್ದಪ್ಪ (35), ಮಾರುತಿ (20) ಮಂಜಪ್ಪ(28), ಸುರೇಶ್ (22), ಚೌಡಪ್ಪ (35), ಕೃಷ್ಣ (26) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ತಂಗಿಯರನ್ನು ನಾಯಕಟನಹಟ್ಟಿಯ ಮೂಲದ ವ್ಯಕ್ತಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ಮೂವರು ಮೃತರು ಸಹೋದರಿಯ ಕುಟುಂಬದವರ ವ್ಯವಹಾರಕ್ಕೆ ಅಡ್ಡಿಯಾಗಿದ್ದರಿಂದ ಅವರನ್ನು ಹತ್ಯೆ ಮಾಡಿ, ಸುಮಾರು 80ಕ್ಕೂ ಹೆಚ್ಚು ಹಂದಿಗಳನ್ನು ಕಳ್ಳತನ ಮಾಡಿಕೊಂಡು ಮೂವರನ್ನು
ಮಾರಕಾಸ್ತ್ರಗಳಿಂದ ಭೀಕರವಾಗಿ ಮೂವರನ್ನು ಹತ್ಯೆಮಾಡಿದ್ದ
ಕೊಲೆ ಮಾಡಿ ಆರೋಪಿಗಳು ಕೊಲೆಗಡುಕರು ಪರಾರಿಯಾಗಿದ್ದರು.
ಇದೀಗ ಚಿತ್ರದುರ್ಗ ಜಿಲ್ಲೆಯ ವಿವಿಧ ಠಾಣೆಯ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆಯಿಂದ ಆರೋಪಿಗಳು ಬಂಧನವಾಗಿದ್ದಾರೆ. ಈ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇದನ್ನು ಬೇಧಿಸಿದ ಆರೋಪಿಗಳನ್ನು ಬಂಧಿಸಿರುವ ಪೋಲಿಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ವರಿಷ್ಠಾಧಿಕಾರಿ ಜಿ.ರಾಧಿಕಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Send this to a friend