ಚಿತ್ರದುರ್ಗ: ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ನಂತರ ಚಿತ್ರದುರ್ಗದ ಬಿಜೆಪಿ ಮುಖಂಡ ನವೀನ್ ಮಾಲೀಕತ್ವದ ನವೀನ್ ರೆಸಿಡೆನ್ಸಿಗೆ ಭೇಟಿ ನೀಡಿದ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಪಿಟ್ಸ್ ನಿಂದಾಗಿ ಮೂರ್ಚೆ ಹೋದ ಘಟನೆ ನಡೆದಿದೆ.
ಹೋಟೆಲ್ ಮುಂಭಾಗ ಕಾರಿನಿಂದ ಇಳಿಯುತ್ತಿದ್ದಂತೆ ಪಿಟ್ಸ್ ಬಂದು ಮೂರ್ಚೆ ಹೋದ ಡಿವಿ ಸದಾನಂದಗೌಡರನ್ನು ಅಂಗರಕ್ಷಕರು ಪೊಲೀಸ್ ಎಸ್ಕಾರ್ಟ್ ಅಹನದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.