ಚಿತ್ರದುರ್ಗ : ಅಹಿಂದ ವರ್ಗಕ್ಕೆ ಮೋಸ ಮಾಡಿದ ವ್ಯಕ್ತಿ ಸಿದ್ದರಾಮಯ್ಯ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಸಿದ್ದರಾಮಯ್ಯನ ವಿರುದ್ಧ ಕಿಡಿಕಾರಿದರು. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿರೋಧ ಪಕ್ಷದ ನಾಯಕರಿಗೆ ಬೇರೆ ಕೆಲಸ ಏನಿದೆ ಅವರು ಟೀಕೆ ಮಾಡುವುದೇ ಅವರ ಗುರಿಯಾಗಿದೆ, ಇನ್ನು ಬಿಜೆಪಿ ಸರ್ಕಾರದ ಡಕೋಟಾ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶ್ರೀರಾಮುಲು ತಿರುಗೇಟು ನೀಡಿದರು. ಸಿದ್ದರಾಮಯ್ಯ ಸಿಎಂ ಕುರ್ಚಿ ಮೇಲೆ ಕಣ್ಣಾಕಿಕೊಂಡು ಕೂತಿದ್ದಾರೆ ಆದರೆ ಜನರ ಪರ ನಮ್ಮ ಸರ್ಕಾರ ನಡೆದುಕೊಳ್ಳುತ್ತಿದೆ ಎಂದರು. ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಹಾರಲು ಬಹಳ ಮಂದಿ ಕಾಂಗ್ರೇಸ್ ನಲ್ಲಿ ಮ್ಯೂಜಿಕಲ್ ಚೇರ್ ನಡೆಸಿದ್ದಾರೆ. ಇತ್ತ ಡಿಕೆ ಶಿವಕುಮಾರ್ ನಾನು ಸಿಎಂ ಆಗಬೇಕು ಎಂದು ಹೊರಟಿದ್ದಾರೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಜನರ ಹಿತ ದೃಷ್ಟಿಯಿಂದ ಕೆಲಸ ಮಾಡುವವರು. ಸಿಎಂ ಕುರ್ಚಿಗೆ ಕಣ್ಣಾಕಿ ಕೆಲಸ ಮಾಡುತ್ತಾರೆ. ನಮಗೂ ಅವರಿಗೂ ತುಂಭಾನೇ ವ್ಯತ್ಯಾಸ ಇದೆ ಎಂದು ಸಚಿವರು ತಿಳಿಸಿದರು. ಸಿದ್ದರಾಮಯ್ಯ ಸಿಎಂ ಆದಾಗ ನಾಡಿನ ಜನರು ನೋಡಿದ್ದಾರೆ. ಅಹಿಂದ ವರ್ಗಕ್ಕೆ ಮೋಸ ಮಾಡಿದ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯ ಹಾಗೂ ಹಿಂದುಳಿದ, SC-ST ಸಮುದಾಯವನ್ನು ಸಿದ್ದರಾಮಯ್ಯ ಕಡೆಗಣಿಸಿದ್ದರು. ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ ಎಂದು ಜನರಿಗೆ ಅರಿವಾಗಿದೆ. ಅಹಿಂದ, ಹಿಂದ ರಾಜ್ಯದಲ್ಲಿ ನಡೆಯಲ್ಲ.
ಡೈರೆಕ್ಟ್ ಟಾರ್ಗೇಟ್ ಸಿಎಂ ಕುರ್ಚಿಗೆ ಹಾರಲು ಸಿದ್ದರಾಮಯ್ಯ ಇದ್ದಾರೆ. ಇತ್ತ KPCC ಅಧ್ಯಕ್ಷ ಡಿಕೆಶಿ ಕೈ , ಕಾಲು ಎಳೆಯುತ್ತಾರೆ ಎಂದರು. ಇನ್ನು ರಾಜ್ಯದಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿದೆ. ಮಸ್ಕಿ, ಬೆಳಗಾವಿ, ಬಸವಕಲ್ಯಾಣ ಮೂರು ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ಸಚಿವರು ಹೇಳಿದರು.