ಚಿತ್ರದುರ್ಗ : ಇಂದಿನಿಂದ ದೇಶಾದ್ಯಂತ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೋಟೆ ನಾಡು ಚಿತ್ರದುರ್ಗದಲ್ಲಿ ಸಚಿವ ಶ್ರೀರಾಮುಲು ಲಸಿಕಾ ವಿಚಾರಣೆಗೆ ಚಾಲನೆ ನೀಡಿದರು. ಜಿಲ್ಲಾಸ್ಪತ್ರೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಹೆಲ್ತ್ ವಾರಿಯರ್ ಅಜಯ್ ಎಂಬುವವರು ಮೊದಲ ಲಸಿಕೆ ಪಡೆದುಕೊಂಡರು. ಜಿಲ್ಲೆಯ 8 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಸಿದ್ದರಾಮಯ್ಯನ ಹೇಳಿಕೆಗೆ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದರು. ಸಮ್ಮಿಶ್ರ ಸರ್ಕಾರ ವೇಳೆ ಕುಮಾರಸ್ವಾಮಿ ಅವರನ್ನ ಕೆಳಗಿಳಿಸಿದ್ರು, ಇವತ್ತು ಬಿಜೆಪಿ ಸರ್ಕಾರದ ಬಗ್ಗೆ ನೈತಿಕ ಬಗ್ಗೆ ಮಾತಾಡ್ತಾರೆ. ಮತಿಭ್ರಮಣೆಯಾಗಿ ಈರೀತಿ ಪದೇ ಪದೇ ಹೇಳಿಕೆ ಕೊಡುತ್ತಿದ್ದಾರೆ. ಇವತ್ತು ಮುಖ್ಯಮಂತ್ರಿ ಸಿಎಂ ಬಿಎಸ್ವೈ ಅವರನ್ನು ಕೆಳಗಿಸೋ ಕೆಲಸ ಮಾಡುತ್ತಿದ್ದಾರೆ ಎಂದರು. ಎಲ್ಲೂ ಕೂಡ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಆಗಲಿಲ್ಲ, ಅದಕ್ಕೋಸ್ಕರ ಪುಗಸಟ್ಟೆ ಪಬ್ಲಿಸಿಟಿ ಪಡೆಯೋ ಕೆಲಸ ಮಾಡುತ್ತಿದ್ದಾರೆ. ಈರೀತಿ ಹೇಳಿಕೆಗಳನ್ನು ಕೊಡುವುದು ಕೂಡಲೇ ನಿಲ್ಲಿಸಬೇಕೆಂದರು. ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಲಿ ಎಂದು ಸಿದ್ದರಾಮಯ್ಯಗೆ ತಿಳಿ ಹೇಳಿದರು.
ಇನ್ನು ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು ಭಾರತೀಯ ಜನತಾ ಪಾರ್ಟಿಯಲ್ಲಿ ಹಿಟ್ ಅಂಡ್ ಹೇಳಿಕೆ ಸಲ್ಲದು ಎಂದಿದ್ದಾರೆ. ಹೇಳಿಕೆ ನೀಡುವ ಸಂದರ್ಭದಲ್ಲಿ ಸಮಾಜ ನೀಡುವಂತಿರಬೇಕು.ಆಧಾರರಹಿತ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಬಿಜೆಪಿ ಪಕ್ಷ ಶಿಸ್ತಿನ ಪಕ್ಷ ಎಂದರು. ಈರೀತಿ ಅಶಿಸ್ತಿನ ಹೇಳಿಕೆ ನೀಡಿದಾಗ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಯತ್ನಾಳ್ ಹೇಳಿಕೆಯನ್ನು ಗಮನಿಸಿ ಅಮಿತ್ ಷಾ ಗಮನಕ್ಕೆ ತರಲಾಗುವುದು. ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲಸ ಮಾಡಲಾಗುತ್ತದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.