ಚಿತ್ರದುರ್ಗ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಮತ್ತು ರೈತ ವಿರೋಧಿ ಹಾಗೂ ಸಂವಿಧಾನ ವಿರೋಧಿ ನಡೆಯನ್ನು ದೇಶ ವಾಸಿಗಳು ಒಕ್ಕೊರಲಿನಿಂದ ಖಂಡಿಸಿ ಬೀದಿಗಿಳಿದು ಪ್ರತಿಭಟಿಸುವ ಕಾಲ ಬಂದಿದೆ. ಅಂತಹ ಒಂದು ಅವಕಾಶವನ್ನು ದೇಶದ ಬೆನ್ನೆಲುಬು ಎಂದು ರೈತ ಸಂಘಟನೆಗಳು ನಮಗೆ ಒಸಗಿಸಿ ಕೊಟ್ಟಿವೆ. ಬಿಜೆಪಿಯ ಮೋದಿ ಮತ್ತು ಯಡಿಯೂರಪ್ಪ ನಡೆ ದೇಶವನ್ನು ಅಸ್ಥಿರ ಮತ್ತು ಅರಾಜಕತೆಯತ್ತಾ ಕೊಂಡೊಯ್ದು ಭಾರತವನ್ನು ವಿನಾಶದಂಚಿಗೆ ತಳ್ಳಿವೆ ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ. ಶಿವು ಯಾದವ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿ ಕೊಂಡು, ಭಾರತ ದೇಶದ ಆಸ್ತಿ ಪಾಸ್ತಿಯನ್ನು ಕಾನೂನು ಬಾಹಿರವಾಗಿ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ ಬಿಜೆಪಿ ಸರ್ಕಾರ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸರ್ಕಾರ ನಡೆಸಲು ಸಹ ಖಾಸಗಿ ಕಂಪನಿಗನಿಗಳ ಸಹ ಬಾಗಿತ್ವ ಬಂದರು ಬರಬಹುದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ-ರಾಜ್ಯ ಸರ್ಕಾರಗಳು ಮಂಡಿಸಿರುವ ರೈತರ ವಿರೋಧಿ ಕೃಷಿಯ ಮಸೂದೆಗಳನ್ನು ಅಂಗೀಕರಿಸುವುದರ ವಿರುದ್ಧ ಮತ್ತು ರೈತರಿಗೆ ಕಾರ್ಮಿಕರಿಗೆ ಮಾರಕವಾದ ಭೂಸುಧಾರಣೆ ಕಾಯ್ದೆತಿದ್ದುಪಡಿ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿ.
ಮೂರು ಮಸೂದೆಗಳನ್ನು ಚರ್ಚೆಗೆ ಅವಕಾಶ ನೀಡದೇ ಅಸಂಸದೀಯ ವ್ಯವಸ್ಥೆ ಮೂಲಕ ಸಂಸತ್ತಿನಲ್ಲಿ ಅಂಗೀಕರಿಸುವುದನ್ನು ಪ್ರತಿಭಟಿಸಿ ರಾಜ್ಯದಲ್ಲಿ ರೈತರು, ಕನ್ನಡಪರ ಸಂಘಟನೆಗಳು, ದಲಿತ ಕಾರ್ಮಿಕ ಹೋರಾಟ ಸಮಿತಿ ಮತ್ತಿತರ ಸಂಘಟನೆಗಳು ಸೋಮವಾರ 25/28 ರಂದು ನಡೆಸುತ್ತಿರುವ ಚಳುವಳಿಗೆ ಹಾಗೂ “ಭಾರತ್ ಬಂದ್” , “ಕರ್ನಾಟಕ ಬಂದ್ “- “ರಾಜ್ಯ ರಾಷ್ಟ್ರೀಯ, ಹೆದ್ದಾರಿ ಬಂದ್ ” ಎಲ್ಲಾ ಚಳುವಳಿಗಳಿಗೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾದ್ಯಕ್ಷರು ಹಾಗೂ ಜಿಲ್ಲಾ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ ಶಿವುಯಾದವ್ ತಿಳಿಸಿದ್ದಾರೆ. ತಿಳಿಸಿದ್ದಾರೆ