ಸಿಎಂ ಸಂಧಾನ ಯಶಸ್ವಿ; ಯಾವುದೇ ಅಸಮಾಧಾನವಿಲ್ಲ ಎಂದ ಸಚಿವ ಶ್ರೀರಾಮುಲು.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು ಸಚಿವ ಶ್ರೀರಾಮುಲು ಹಾಗೂ ಸುಸುಧಾಕರ್ ಇಬ್ಬರನ್ನು ಮುಖಾಮುಖಿ ಕೂರಿಸಿ ಮಾತನಾಡಿಸಿದ್ದು, ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ನಿನ್ನೆಯಿಂದ ಸಚಿವ ಸ್ಥಾನ ಬದಲಾವಣೆ ಹಿನ್ನೆಲೆ ಅಸಮಾಧಾಗೊಂಡಿದ್ದ ಶ್ರೀರಾಮುಲು ಅವರನ್ನು ಸಿಎಂ ಬಿಎಸ್​ವೈ ಇಂದು ತಮ್ಮ ಮನೆಗೆ ಕರೆಸಿ ಮಾತನಾಡಿದ್ದಾರೆ. ಸಭೆ ಬಳಿಕ ಮಾತನಾಡಿದ ಶ್ರೀರಾಮುಲು, ಸಿಎಂ ನೀಡಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆ ಎಂದರು. ಸಾಮಾಜ ಕಲ್ಯಾಣ ಇಲಾಖೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ
2008-09ರಲ್ಲಿ ಉತ್ತಮ ಕೆಲಸ ಮಾಡಿದ್ದಕ್ಕಾಗಿ ಈ ಹಿಂದೆ ಆರೋಗ್ಯ ಇಲಾಖೆ ನೀಡಿದ್ರು. ಈಗ ಬಡವರಿಗಾಗಿ ಕೆಲಸ ಮಾಡಲು ಈ ಖಾತೆ ನೀಡಲು ಸಿಎಂ ಬಿಎಸ್​ವೈ ನಿರ್ಧರಿಸಿರುವುದರಿಂದ ಸಾಮಾಜ ಕಲ್ಯಾಣ ಇಲಾಖೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ಆರೋಗ್ಯ ಸಚಿವನಾಗಿ ಕೊರೊನಾ ಸಂದರ್ಭದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಈಗ ನೀಡಿರುವ ಜವಾಬ್ದಾರಿಯನ್ನು ಸಹ ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು

Leave a Reply

Your email address will not be published.

Send this to a friend