ಶಿವಮೊಗ್ಗ:- ಹೊಟ್ಟೆಪಾಡಿಗಾಗಿ ಊರು ಬಿಟ್ಟು ಬಂದವರು ಕೆಲಸ ಮಾಡುತ್ತಲೇ ಸಮಾಧಿಯಾದ ಘಟನೆ ನಗದ ಹೊರವಲಯದ ಗೆಜ್ಜೇನಹಳ್ಳಿಯಲ್ಲಿ ಸಂಭವಿಸಿದೆ. ಗೆಜ್ಜೇನಹಳ್ಳಿಯ ಕ್ರಷರ್ನಲ್ಲಿ ಮಂಗಳವಾರ ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ.ಅಸ್ಸಾಂನ ಚಿರಾಂಗ್ ಜಿಲ್ಲೆಯ ಬುಂಜಲ್ ಗ್ರಾಮದ ದ್ವಿಕೊಲಾಂಗ್ (25) ಹಾಗೂ ಪ್ರೆಸಿಂಗ್ಟೋನ್ (25) ಮೃತರು. ಆರು ತಿಂಗಳಿಂದ ಇಬ್ಬರೂ ಕ್ರಷರ್ನಲ್ಲಿ ಕೆಲಸ ಮಾಡುತ್ತಿದ್ದರು. ಕ್ರಷರ್ನಲ್ಲಿ ಕಟ್ಟಿದ ಜಿಂಕ್ಶೀಟ್ಗೆ ಮಂಗಳವಾರ ಜೆಲ್ಲಿ ಕಲ್ಲು ತುಂಬಿದ ಟ್ರ್ಯಾಕ್ಟರ್ ತಾಗಿದ್ದರಿಂದ ಮಣ್ಣು ಕುಸಿದಿದೆ. ಇದರಿಂದ ಜಿಂಕ್ಶೀಟ್ ಮತ್ತು ಕಲ್ಲುಗಳು ಕೂಡ ಕೆಳಕ್ಕೆ ಜರಿದಿವೆ.ಅವಘಡದಲ್ಲಿ ದ್ವಿಕೊಲಾಂಗ್ ಸ್ಥಳದಲ್ಲಿಯೇ ಮೃತಪಟ್ಟರೆ, ಆಸ್ಪತ್ರೆಗೆ ದಾಖಲಾಗಿದ್ದ ಪ್ರೆಸಿಂಗ್ಟೋನ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕ್ರಷರ್ ಮಾಲೀಕರ ಪ್ರಕರಣ ದಾಖಲಿಸಿಕೊಂಡಿದ್ದಾರೆ.