ಕೊರೊನಾ ಪಾಸಿಟಿವ್ ಕೇಸ್​ಗಳನ್ನ ಶೇ.5 ಕ್ಕಿಂತ ಕಡಿಮೆಗೆ ತರಬೇಕಾಗಿದೆ : ಮೋದಿ.

ನವದೆಹಲಿ: ಕೊರೊನಾ ವ್ಯಾಕ್ಸಿನ್​​​​ ತಯಾರಿಕೆ ಬಗ್ಗೆ ವಿಜ್ಞಾನಿಗಳು ಗಮನ ಹರಿಸಿದ್ದಾರೆ. ನಾವು ಕೊರೊನಾ ನಿಯಂತ್ರಣಕ್ಕಾಗಿ ಮೈ ಮರೆಯದೇ ನಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಪ್ರಧಾನಿ ಮೋದಿ, ಎಚ್ಚರ ಪೂರ್ವಕವಾದ ಮಾತುಗಳನ್ನು ಆಡಿದ್ದಾರೆ.

ಕೊರೊನಾ ಲಸಿಕೆ ಸಂಬಂಧ ಪ್ರಧಾನಿ ಮೋದಿ ಅವರು 8 ರಾಜ್ಯಗಳ ಜೊತೆ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಮೋದಿ. ನಿಮ್ಮೆಲ್ಲರ ಜಂಟಿ ಪ್ರಯತ್ನಗಳ ಫಲವಾಗಿ, ಇಂದು ಭಾರತವು ಚೇತರಿಕೆ ಪ್ರಮಾಣ ಹೆಚ್ಚಾಗಿದೆ ಅಂತಾ ಹೇಳಿದರು. ದೇಶದಲ್ಲಿ ಸಾವಿನ ಪ್ರಮಾಣ ಕಮ್ಮಿಯಾಗಿದೆ. ಇತರೆ ದೇಶಗಳಿಗೆ ನಾವು ಹೋಲಿಸಿದರೆ ಕೊರೊನಾ ವಿಚಾರದಲ್ಲಿ ಭಾರತದ ಪರಿಸ್ಥಿತಿ ಉತ್ತಮವಾಗಿದೆ ಅಂತಾ ಹೇಳಿದರು. ಆದರೂ. ಹಲವು ರಾಷ್ಟ್ರಗಳಲ್ಲಿ ಎರಡನೇ ಮತ್ತು ಮೂರನೇ ಅಲೆಗಳು ದೊಡ್ಡ ಪ್ರಮಾಣದಲ್ಲಿ ಬಂದಿರೋದನ್ನು ನಾವು ಗಮನಿಸಿದ್ದೇವೆ. ಹೀಗಾಗಿ, ನಾವು ಸದ್ಯ ಮತ್ತಷ್ಟು ಎಚ್ಚರ ವಹಿಸಬೇಕಿದೆ ಅಂತ ಅವರು ಹೇಳಿದ್ದಾರೆ. ಅಲ್ಲದೇ, ನಾವು ಆಳ ನೀರನ್ನು ದಾಟಿ ದಡದತ್ತ ಬರುತ್ತಿದ್ದೇವೆ. ಹೀಗಾಗಿ ಈಗ ಮೈ ಮರೆತು ಕಡಿಮೆ ಆಳದ ನೀರಿನಲ್ಲಿ ಮುಳುಗಬಾರದು ಅಂತಾ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

Leave a Reply

Your email address will not be published.

Send this to a friend