ಡೆಂಟಲ್​ ಕೇರ್​: ಬಾಲ್ಯದ ದಂತಕ್ಷಯ ತಡೆಯೋಣ…

ಇಂದು ಜಗತ್ತಿನಾದ್ಯಂತ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಸಮಸ್ಯೆ ಎಂದರೆ ಛಿಚ್ಟ್ಝ ್ಚಜ್ಝಿಛಜಟಟಛ ್ಚ್ಟಛಿಠ. ಇದು ಮಗುವಿನ ಬಾಯಿಯ ಆರೋಗ್ಯದ ಮೇಲಲ್ಲದೆ ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದೊಂದು ದಂತಕ್ಷಯದ ಅನನ್ಯ ಮಾದರಿಯಾಗಿದ್ದು, ಆರು ವರ್ಷದ ಒಳಗಿನ ಮಕ್ಕಳನ್ನೇ ಹೆಚ್ಚಾಗಿ ಬಾಧಿಸುತ್ತದೆ. ಇದು ಬಹು ಅಂಶಗಳಿಂದ ಕೂಡಿದ ತೊಂದರೆಯಾಗಿದ್ದು ಆರೋಗ್ಯಕರವಲ್ಲದ ಮತ್ತು ಅವೈಜ್ಞಾನಿಕ ಆಹಾರಕ್ರಮಗಳಿಂದಾಗಿ ಉಂಟಾಗುವಂತಹುದು. ಇದನ್ನು nursing bottle caries / baby bottle cariesಎಂದೂ ಕರೆಯುತ್ತಾರೆ. ಯಾವ ಮಕ್ಕಳು ಹಾಲಿನ ಬಾಟಲಿಯನ್ನು ದೀರ್ಘಕಾಲದವರೆಗೆ (ಬೆಳಗಿನ ಸಮಯ ಅಥವಾ ರಾತ್ರಿ ಮಲಗುವ ವೇಳೆ) ಬಾಯಿಯಲ್ಲಿ ಇಟ್ಟುಕೊಳ್ಳುತ್ತಾರೋ ಅಂಥವರಲ್ಲಿ ಹೆಚ್ಚು ಕಾಣಬಹುದು.ನಿದ್ರೆ ಮಾಡುವಾಗ ಬಾಯಿಯಲ್ಲಿ ಲಾಲಾರಸದ ಹರಿವು ಕಡಿಮೆಯಾಗಿರುತ್ತದೆ. ಅಲ್ಲದೆ ನುಂಗುವ ಪ್ರಕ್ರಿಯೆಯೂ ಇರುವುದಿಲ್ಲ. ಇಂಥ ಸಮಯದಲ್ಲಿ ಹಾಲು ಅಥವಾ ಸಿಹಿ ಪಾನೀಯ ಬಾಯಿಯಲ್ಲೇ ಉಳಿದು ಹಲ್ಲಿನೊಂದಿಗೆ ಸದಾ ಸಂಪರ್ಕದಲ್ಲಿ ಇರುವಂತಾದಾಗ ಹಲ್ಲು ಹುಳುಕು ಉಂಟುಮಾಡುವ ಸೂಕ್ಷ್ಮಜೀವಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿ ಹುಳುಕು ಉಂಟಾಗುತ್ತದೆ. ಇದು ಬಹಳ ಬೇಗ ಹರಡುವಂಥದ್ದಾಗಿದ್ದು ಹಲವು ಬಾರಿ ಹಲ್ಲು ಹುಟ್ಟುವ ಮೊದಲೇ ಕ್ಷಯಕ್ಕೆ ಗುರಿಯಾಗಿರುತ್ತದೆ.

ಕಾರಣಗಳು: * 12-15 ತಿಂಗಳ ನಂತರವೂ ಮಗುವಿಗೆ ಬಾಟಲಿಯಲ್ಲಿ ಹಾಲುಣಿಸುವುದು.

* ರಾತ್ರಿ ವೇಳೆ ಹಾಲುಣಿಸಿದ ನಂತರ ಅಥವಾ ಆಹಾರ ಸೇವನೆಯ ನಂತರ ಬಾಯಿಯನ್ನು ಶುಚಿಗೊಳಿಸದಿರುವುದು.

* ಅನಿಯಂತ್ರಿತವಾಗಿ ರಾತ್ರಿ ವೇಳೆಯೂ ತಾಯಿಹಾಲನ್ನು ಉಣಿಸುವುದು.

* ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಸಕ್ಕರೆಯುಕ್ತ ಪಾನೀಯ / ಹಾಲನ್ನು ಬಾಟಲಿಯಲ್ಲಿ ಹಾಕಿ ಅನಿಯಂತ್ರಿತವಾಗಿ ಕೊಡುವುದು

* ಹಾಲು ಮಾತ್ರವಲ್ಲದೆ ಜೇನುತುಪ್ಪ, ಸಕ್ಕರೆಯುಕ್ತ ಹಣ್ಣಿನ ರಸ, ಸಿಹಿಯಾದ ಪಾನಿಯಗಳು, ಸಕ್ಕರೆ ಹಾಕಿದ ಹಾಲು ಅಥವಾ ನೀರು, ಸಿಹಿತಿನಿಸುಗಳಿಂದಲೂ ಈ early childhood caries ಉಂಟಾಗುತ್ತದೆ

Leave a Reply

Your email address will not be published.

Send this to a friend