ನಿರ್ಜನ ಪ್ರದೇಶಗಳಲ್ಲಿ ನಾಯಿ ತಲೆ ಬುರುಡೆಗಳು ಪತ್ತೆ!

ಹಾಸನ:- ನಿರ್ಜನ‌ ಪ್ರದೇಶದಲ್ಲಿ ನೂರಾರು ನಾಯಿಗಳ ತಲೆ ಬುರುಡೆಗಳು ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹೊಳೆನರಸೀಪುರ ತಾಲೂಕಿನ ಕೊಲ್ಲಿಹಳ್ಳ ಪ್ರದೇಶದಲ್ಲಿ ಶ್ವಾನಗಳ ತಲೆ ಬುರುಡೆಗಳು ಪತ್ತೆಯಾಗಿದೆ. ನಾಯಿಯ ಮಾಂಸಕ್ಕಾಗಿ ಮಾರಣಹೋಮ‌ ನಡೆಸಲಾಗಿದೆ ಎನ್ನಾಗಿದೆ. ನಿರ್ಜನ ಪ್ರದೇಶವಾಗಿರುವ ಹಿನ್ನೆಲೆ ಇಲ್ಲಿ ತಂದು ಬಿಸಾಡಲಾಗಿದೆ ಎನ್ನಲಾಗಿದೆ.‌

ಶ್ವಾನಗಳ ಸಾಮೂಹಿಕ‌ ಮಾರಣಹೋಮಕ್ಕೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ‌ ಮಾಡಿದ್ದಾರೆ.

Leave a Reply

Your email address will not be published.

Send this to a friend