ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಡಾ. ಸಾಸಲು ಸತೀಶ್

ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಯುವ ನಾಯಕ ಹಾಗೂ ರಾಜ್ಯ ಕಾಡುಗೊಲ್ಲರ ಭವಿಷ್ಯದ ಆಶಾಕಿರಣ ಡಾ. ಸಾಸಲು ಸತೀಶ್ ನವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಟಿ ಗೊಲ್ಲಹಳ್ಳಿಯ ಶ್ರೀ ಗೋಲ್ಲಾಳೇಶ್ವರ ದೇವರಿಗೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಲ್ಲಿ ಇಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸರಳವಾಗಿ ಆಚರಿಸಿಕೊಂಡರು.

ಕೊರೋನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಜನ್ಮದಿನಾಚರಣೆಯ ಆಚರಿಸಿಕೊಂಡ ಡಾ. ಸಾಸಲು ಸತೀಶ್ ಒಬ್ಬ ಹಿಂದುಳಿದ ಯುವನಾಯಕ ಹಾಗೂ ರಾಜ್ಯ ಕಾಡುಗೊಲ್ಲರ ಭವಿಷ್ಯದ ಆಶಾಕಿರಣ ಎಂದು ಗುರುತಿಸಿಕೊಂಡಿದ್ದಾರೆ. ಕಾಡುಗೊಲ್ಲರ ಬಗ್ಗೆ ಧ್ವನಿ ಎತ್ತುವ ಮೂಲಕ ಹಾಗೂ ಹಿಂದುಳಿದ ವರ್ಗಗಳ ದೀನದಲಿತರಿಗೆ, ಬಡವರಿಗೆ ಸಹಾಯ ನೀಡುವ ಮೂಲಕ ಹಿಂದುಳಿದ ವರ್ಗದ ಯುವನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಕೊರೊನಾದಿಂದ ಲಾಕ್ ಡೌನ್ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಣೆ ಮಾಡಿ ಖ್ಯಾತಿ ಪಡೆದುಕೊಂಡರು.

ಪ್ರಸ್ತುತ ಇವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದು ಒಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ನಂತರ ಇವರು ಸೋತೆ ಎಂಬ ಪದವನ್ನು ಬಿಟ್ಟು, ಸೋಲಿಗೆ ದೃತಿಗೆಡದೆ ಪಕ್ಷವನ್ನು ಸಂಘಟನೆ ಮಾಡಿಕೊಂಡು ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭದ್ರಕೋಟೆಯಾಗಿ ವಶಪಡಿಸಿಕೊಳ್ಳುವಷ್ಟು ಪಕ್ಷವನ್ನು ಸಂಘಟಿಸಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಕುರಿಗಾಯಿಗಳ ಮೇಲೆ ಹಲ್ಲೆ ನಡೆದರೆ ವಿಶೇಷವಾಗಿ ಧ್ವನಿ ಎತ್ತುವ ಮಹಾನ್ ಯುವ ನಾಯಕನಾಗಿದ್ದಾರೆ.

ಡಾ. ಸತೀಶ್ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಅತ್ಯಂತ ಸರಳ ಸಜ್ಜನಿಕೆ ಹೃದಯವಂತ ಸತೀಶ್ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಇಂಥ ಯುವ ನಾಯಕ ಇಂದು ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡಿದ್ದಾರೆ. ಹೊಸದುರ್ಗ, ಹಿರಿಯೂರು, ಚಿಕ್ಕನಾಯಕನಹಳ್ಳಿ ಮತ್ತಿತರ ಕಡೆ ಅವರ ಅಭಿಮಾನಿಗಳು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

Leave a Reply

Your email address will not be published.

Send this to a friend