ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುತಿದ್ದು, ಬೂತ್ ಮಟ್ಟದ ಸಭೆಯಲ್ಲಿ ಮತ ಕೇಳಲು ಬಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡಗೆ ಮತದಾರರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಇದೀಗ ಪುಲ್ ವೈರಲ್ ಆಗಿದೆ.
ಶಿರಾ ತಾಲೂಕಿನ ಬಂದಗುಂಟೆ ಗ್ರಾಮಕ್ಕೆ ಬಂದ ಮಾಜಿ ಶಾಸಕ ಹಾಗೂ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಸಂಭವಿಸಿದೆ.
ಗ್ರಾಮಸ್ಥರು ಗ್ಯಾಸ್ ಸಬ್ಸಿಡಿ ಯಾಕೆ ವಾಪಸ್ ತೆಗೆದುಕೊಂಡಿದ್ದೀರಾ ?. ಬಿಜೆಪಿಯಿಂದ ರೈತರಿಗೆ ಅನುಕೂಲವಾಗಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಂದಗುಂಟೆ ಗ್ರಾಮದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಬೂತ್ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ಸುರೇಶ್ ಗೌಡ ಬಂದಿದ್ದರು. ಈ ವೇಳೆ ಆಕ್ರೋಶಗೊಂಡ ಕೆಲವು ಸ್ಥಳೀಯ ಗ್ರಾಮಸ್ಥರು ಸ್ಥಳೀಯ ಮದಲೂರು ಕೆರೆಗೆ ಮೊದಲು ನೀರು ಹರಿಸಿ. ಆನಂತರ ಮಾತನಾಡಿ ಎಂದಿದ್ದಾರೆ. ಇದಲ್ಲದದೆ ಗ್ಯಾಸ್ ಸಬ್ಸಿಡಿ ಯಾಕೆ ವಾಪಸ್ ತೆಗೆದುಕೊಂಡಿದ್ದೀರಾ ? ರೈತರಿಗೆ ನಿಮ್ಮ ಸರ್ಕಾರದಿಂದ ಅನುಕೂಲ ಆಗುತ್ತಿಲ್ಲ ಎಂದು ಕಿಡಿಕಾರಿದರು. ನಿಮ್ಮ ಸರ್ಕಾರ ಇದದು ಕೂಡ ಮೊದಲು ನಮ್ಮೂರಿನ ಕೆರೆಗೆ ನೀರು ಬಿಡಿಸಿ ಎಂದು ಮಾಜಿ ಶಾಸಕರಿಗೆ ಸ್ಥಳೀಯರು ಆಗ್ರಹಿಸಿದರು.
ಇತ್ತ ಮಾಜಿ ಶಾಸಕ ಸುರೇಶ್ ಗೌಡ ತಾಳ್ಮೆಯಿಂದಲೇ ಜನರ ಆಕ್ರೋಶ ನುಡಿಗಳನ್ನು ಆಲಿಸಿದರು. ಬಳಿಕ ನಿಮಗೆ ನೀರು ಬಿಡಿಸಬೇಕು ಅಷ್ಟೆ ಅಲ್ವ ಎನ್ನುವ ಮೂಲಕ ನಿಮ್ಮ ಬೇಡಿಕೆ ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ದೃಶ್ಯವನ್ನು ಅಲ್ಲೇ ಇದ್ದ ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ ಇದೀಗ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.