ವಿಶ್ವನಾಥ್ ಸಚಿವ ಸ್ಥಾನದ ಕನಸಿಗೆ : ಹೈಕೋರ್ಟ್ ಶಾಕ್

ಬೆಂಗಳೂರು: ಸಚಿವನಾಗುತ್ತೆನೆಂದು ಕನಸು ಕಾಣುತ್ತಿದ್ದ ಹೆಚ್. ವಿಶ್ವನಾಥ್​ಗೆ ಹೈಕೋರ್ಟ್ ಶಾಕ್ ನೀಡಿದೆ. ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

ಸಂವಿಧಾನದ ಆರ್ಟಿಕಲ್ 164 (1B), 361 B ಅಡಿ ವಿಶ್ವನಾಥ್ ಅವರು ಅನರ್ಹ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಇದೇ ವೇಳೆ ಆರ್. ಶಂಕರ್, ಎಂಟಿಬಿ ನಾಗರಾಜ್​ಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸಂವಿಧಾನದಡಿ ಮರುಆಯ್ಕೆ ಆಗಿರುವುದರಿಂದ ಅನರ್ಹತೆಯಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. ಒಟ್ಟಾರೆಯಾಗಿ ಯಡಿಯೂರಪ್ಪ ಸಚಿವ ಸಂಪುಟ ಸೇರಲು ಕಸರತ್ತು ನಡೆಸುತ್ತಿದ್ದ ವಿಶ್ವನಾಥ್ ಕನಸು ಕನಸಾಗಿಯೇ ಉಳಿಯಿತು ಅನ್ನುವಂತಾಗಿದೆ.

Leave a Reply

Your email address will not be published.

Send this to a friend