ನನ್ ಕೂದ್ಲು ಯಾಕಿಷ್ಟೊಂದು ಉದುರ್ತಾ ಇದೆ?!!

ಸದ್ಯ ಬಹುತೇಕ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಕೂದಲು ಉದುರುವಿಕೆ. ಇದನ್ನು ತಡೆಯೋದಕ್ಕೆ ಅನೇಕರು ಬೇರೆ ಬೇರೆ ರೀತಿಯ ಎಣ್ಣೆ, ಟ್ಯಾಬ್ಲೆಟ್​ ಮುಂತಾದವುಗಳ ಮೊರೆ ಹೋಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಮಸ್ಯೆಗೆ ಆಯುರ್ವೇದದಲ್ಲಿ ಸಿಗುವ ಪರಿಹಾರಗಳೇನು ಎಂಬ ವಿಚಾರದ ಬಗ್ಗೆ ಬೆಂಗಳೂರಿನ ಬಸವನಗುಡಿ ಆಯುರ್ವೇದ ಕೇಂದ್ರದ ಡಾ.ಚಂದ್ರಕಲಾ ಎಸ್ ಪುತ್ರನ್ ವಿವರಣೆ ನೀಡಿದ್ದಾರೆ.

ಕೂದಲು ಉದುರುವಿಕೆ ಪುರುಷರು, ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಮೊದಲು ಕೂದಲು ಉದುರುವಿಕೆಗೆ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳಬೇಕು. ಮೊಟ್ಟ ಮೊದಲನೆಯದಾಗಿ, ರಕ್ತ ಹೀನತೆಯ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಶರೀರದಲ್ಲಿನ ಹಾರ್ಮೋನ್​ಗಳ ಸ್ರವಿಸುವಿಕೆಯಲ್ಲಿ ಏನಾದರೂ ವ್ಯತ್ಯಾಸವಾಗಿದೆಯೇ ಎಂದು ಗಮನಿಸಬೇಕು. ಹೆಣ್ಮಕ್ಕಳಲ್ಲಿ ಪಿಸಿಒಡಿ ಇರಬಹುದು, ಥೈರಾಯ್ಡ್ ಸಮಸ್ಯೆ(ಸ್ತ್ರೀ,ಪುರುಷರಿಬ್ಬರಲ್ಲೂ ಕಾಣಿಸಬಹುದು) ಇರಬಹುದು, ಶರೀರದಲ್ಲಿ ಕ್ಯಾಲ್ಶಿಯಂ, ಝಿಂಕ್, ಬಿಕಾಂಪ್ಲೆಕ್ಸ್, ಐರನ್​ ಕಂಟೆಂಟ್ ಕಡಿಮೆ ಆದ್ರೂ ಕೂದಲು ಉದುರುವ ಸಮಸ್ಯೆ ಉಂಟಾಗಬಹುದು. ಬಾಹ್ಯಕಾರಣಗಳಿಂದಲೂ ಕೂದಲು ಉದುರುವಿಕೆ ಕಂಡುಬರಬಹುದು ಎಂದು ಡಾ.ಚಂದ್ರಕಲಾ ವಿವರಿಸುತ್ತಾರೆ.

Leave a Reply

Your email address will not be published.

Send this to a friend